ಮಂಗಳೂರು : ದೇಶಾದ್ಯಂತ ರೈಲು ಅಪಘಾತಗಳ ಸಂಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕರ್ನಾಟಕದಲ್ಲೂ ಇಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದ್ದು, ಮಂಗಳೂರಿನ ಉಳ್ಳಾಲದ ತೊಕ್ಕೊಟ್ಟುವಿಲ್ಲಿಯಲ್ಲಿ ಮಂಗಳೂರು-ಕೇರಳ ರೈಲು ಮಾರ್ಗದ ರೈಲು ಹಳಿಗಳ ಮೇಲೆ ದುಷ್ಕರ್ಮಿಗಳು ಕಲ್ಲು ಇಟ್ಟು ಪರಾರಿಯಾಗಿದ್ದಾರೆ.
ರೈಲುಗಳ ಸಂಚಾರಿಸಿದ ವೇಳೆ ದೊಡ್ಡ ಸದ್ದು ಕೇಳಿ ಸ್ಥಳಿಯರು ಆತಂಕಗೊಂಡು ಸ್ಥಳಕ್ಕೆ ಹೋಗಿ ನೋಡಿದಾಗ ರೈಲ್ವೆ ಹಳಿಗಳ ಮೇಲೆ ಕಲ್ಲು ಇಟ್ಟಿರುವುದು ಘಟನೆ ಬೆಳಕಿಗೆ ಬಂದಿದೆ. ಇನ್ನು ತಡರಾತ್ರಿ ರೈಲ್ವೆ ಹಳಿಗಳ ಮೇಲೆ ದುಷ್ಕರ್ಮಿಗಳು ಕಲ್ಲು ಇಟ್ಟಿದ್ದು, ಸ್ಥಳೀಯರು ಇಬ್ಬರು ದುಷ್ಕರ್ಮಿಗಳನ್ನು ನೋಡಿರುವುದಾಗಿ ತಿಳಿಸಿದ್ದಾರೆ.