ಕರ್ನಾಟಕ

ಚೆಕ್ ಬೌನ್ಸ್ ಕೇಸ್ ನಲ್ಲಿ ನಟಿ ಪದ್ಮಜಾ ರಾವ್ ಗೆ 3 ತಿಂಗಳು ಕಾರಾಗೃಹ ಶಿಕ್ಷೆ

ಕನ್ನಡದ ಖ್ಯಾತ ಹಿರಿಯ ನಟಿ ಪದ್ಮಜಾ ರಾವ್ ಅವರಿಗೆ, ಚೆಕ್ ಬೌನ್ಸ್ ಕೇಸ್ ಸಂಕಷ್ಟ ತಂದೊಡ್ಡಿದೆ. ಈ ಪ್ರಕರಣದಲ್ಲಿ 3 ತಿಂಗಳುಗಳ ಕಾರಾಗೃಹ ಶಿಕ್ಷೆ ವಿಧಿಸಿದ್ದು, 40.20 ಲಕ್ಷ ರೂಪಾಯಿ ದಂಡ ಕೂಡ ವಿಧಿಸಲಾಗಿದೆ.

ನಟಿ ಪದ್ಮಜಾ ರಾವ್ ಅವರಿಗೆ ಚೆಕ್ ಬೌನ್ಸ್ ಕೇಸ್ ಸಂಬಂಧ, ಮಂಗಳೂರಿನ ಜೆಎಂಎಫ್ ಸಿ ಕೋರ್ಟ್ 3 ತಿಂಗಳು ಜೈಲು ಶಿಕ್ಷೆ ಜೊತೆಗೆ, 40.20 ಲಕ್ಷ ರೂಪಾಯಿ ದಂಡ ಕೂಡ ವಿಧಿಸಿದೆ. ನ್ಯಾಯಾಲಯದ ತೀರ್ಪಿನ ಪ್ರಕಾರ, 40.20 ಲಕ್ಷ ಹಣದಲ್ಲಿ ಬಬ40.17 ಲಕ್ಷ ದೂರುದಾರರಿಗೆ ಪಾವತಿಸಬೇಕಿದೆ. ಇನ್ನುಳಿದ 3 ಸಾವಿರ ರೂ.ಗಳನ್ನು ಸರ್ಕಾರಕ್ಕೆ ತುಂಬಬೇಕು ಎನ್ನಲಾಗಿದೆ.