ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದೆ.. ಹೈವೋಲ್ಟೇಜ್ ಎಲೆಕ್ಷನ್ ಎಂದೇ ಜಿಲ್ಲೆಯಲ್ಲಿ ಬಿಂಬಿತವಾಗಿದೆ.. ಮಂಡ್ಯದ ಪ್ರತಿಷ್ಠಿತ ಸಹಕಾರ ಸಂಸ್ಥೆ, ಯಾವ ಪಕ್ಷದ ಪಾಲಾಗಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.. 12 ಮಂದಿ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯುತ್ತಿದೆ.. ಮನ್‌ಮುಲ್ ವಶಕ್ಕೆ ಪಡೆಯಲು ಕಾಂಗ್ರೆಸ್ ಮತ್ತು ಜೆಡಿಎಸ್, ಬಿಜೆಪಿ ಮೈತ್ರಿಕೂಟದ ರಣತಂತ್ರ ಜೋರಾಗಿದೆ.. ಪಕ್ಷದ ಚಿಹ್ನೆಯಲ್ಲಿ ಚುನಾವಣೆ ನಡೆಯದಿದ್ದರೂ ಮೂರು ಪಕ್ಷಗಳಿಗೂ ಮನ್‌ಮುಲ್ ಎಲೆಕ್ಷನ್ ಎನ್ನುವುದು ಪ್ರತಿಷ್ಠೆಯಾಗಿದೆ.. ಕಳೆದ ಬಾರಿ ಕಾಂಗ್ರೆಸ್ ಬೆಂಬಲಿತರು ಮನ್‌ಮುಲ್‌ನಲ್ಲಿ ಗದ್ದುಗೆ ಹಿಡಿದಿದ್ದು ಈ ಬಾರಿಯೂ ಅಧಿಕಾರಕ್ಕೇರಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ.. ಮತ್ತೊಂದೆಡೆ ಕೈತಪ್ಪಿರುವ ಮನ್‌ಮುಲ್ ವಶಕ್ಕೆ ಪಡೆಯಲು ಮೈತ್ರಿ ನಾಯಕರ ಕಸರತ್ತು ಜೋರಾಗಿದೆ.. ಇಂದು ಬೆಳಗ್ಗೆ ಬೆಳಿಗ್ಗೆ 9 ಗಂಟೆಯಿಂದ ಮತದಾನ ಆರಂಭವಾಗಿದ್ದು ಸಂಜೆ 4 ಗಂಟೆವರೆಗೆ ನಡೆಯಲಿದೆ..