ದೊಡ್ಡಬಳ್ಳಾಪುರ : ಜಿಲ್ಲೆಯ ಪಚ್ಚಾರಲಹಳ್ಳಿ ಗ್ರಾಮದಲ್ಲಿ ಗಂಡು - ಗಂಡುಗಳ ನಡುವೆಯೇ ಮದುವೆ ಮಾಡಿಸಿದ ವಿಚಿತ್ರ ಘಟನೆಯೊಂದು ನಡೆದಿದ್ದು, ಮಳೆಗಾಗಿ ಈ ಪುರಾತನ ನಂಬಿಕೆಯ ಮೊರೆ ಹೋಗಿರುವ ಗ್ರಾಮಸ್ಥರು, ಇಬ್ವರು ಹುಡುಗರನ್ನೇ ವಧೂವರರಂತೆ ಸಿಂಗರಿಸಿ ಅದ್ದೂರಿಯಾಗಿ ಮದುವೆ ಮಾಡಿ ಸಂಭ್ರಮಿಸಿದ್ದಾರೆ. ಈ ವಿಚಿತ್ರ ಮದುವೆಯ ಸುದ್ದಿ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಹೌದು, ಗಂಡು ಯುವಕರಿಗೆ ಪರಸ್ಪರ ಮದುವೆ ಮಾಡಿಸಿದರೆ ಮಳೆಯಾಗುತ್ತದೆ ಎಂಬುದು ಜನಪದ ನಂಬಿಕೆಯಾಗಿದ್ದು, ಈಗಲೂ ಸಹ ಕರ್ನಾಟಕದಾದ್ಯಂತ ಈ ಆಚರಣೆಯನ್ನು ಕಂಡು ಬರುತ್ತವೆ. ಇವುಗಳ ಜೊತೆಗೆ, ಕಪ್ಪೆಗೆ ಮದುವೆ ಮಾಡಿಸುವುದು ಹಾಗೂ ಕತ್ತೆಗಳಿಗೆ ಮದುವೆ ಮಾಡಿಸುವುದೂ ಸಹ ಚಾಲ್ತಿಯಲ್ಲಿದೆ. ಒಬ್ಬ ಯುವಕನಿಗೆ ವದುವಿನ ರೀತಿ ಅಲಂಕಾರ ಮಾಡಿದ್ದ ಗ್ರಾಮಸ್ಥರು, ಮತ್ತೊಬ್ಬ ಹುಡುಗನಿಗೆ ಪೇಟ, ಬಾಸಿಂಗ ಕಟ್ಟಿ, ಹುಡುಗಿಗೆ ರೇಷ್ಮೆ ಸೀರೆ, ಉಡಿಸಿ ವರನ ರೀತಿ ಅಲಂಕಾರ ಮಾಡಿದ್ದರು. ಬಳಿಕ ಗ್ರಾಮಸ್ಥರೆಲ್ಲಾ ಸೇರಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿ ಸಿಹಿ ಔತಣವನ್ನೂ ಸಹ ಏರ್ಪಡಿಸಿದ್ದರು.