ಮಾರುತಿ ಸುಜುಕಿ ವ್ಯಾಗನರ್ ಕಾರಿನ ಸ್ಪೆಷಲ್ ಎಡಿಷನ್ ಕಾರು ಮಾರುಕಟ್ಟೆಗೆ ಕಾಲಿಟ್ಟಿದೆ. ಹೊಸ ವಿನ್ಯಾಸ ಹಾಗೂ ವೈಶಿಷ್ಟ್ಯತೆ ಹೊಂದಿರುವ ಈ ಕಾರು, ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದ್ದು ಎಲ್ಲಾ ವರ್ಗದ ಜನರ ಕೈಗೆಟುಕುವಂತಿದೆ. ಈ ಕಾರಿನ ಮೊತ್ತ ಕೇವಲ 5.64 ಲಕ್ಷ ಎಂದು ಕಂಪನಿ ಘೋಷಿಸಿದೆ.
ಟಚ್ ಸ್ಕ್ರೀನ್ ಮ್ಯೂಸಿಕ್ ಸಿಸ್ಟಮ್, ರೇರ್ ವೀವ್ಯೂ ಪಾರ್ಕಿಂಗ್, ಫಾಗ್ ಲ್ಯಾಂಪ್ಸ್, ವ್ಹೀಲ್ ಆರ್ಚ್ ಕ್ಲಾಡಿಂಗ್, ಬಂಬರ್ ಪ್ರೊಟೆಕ್ಟರ್ಸ್, ಫ್ಲೋರ್ ಮ್ಯಾಟ್ಸ್, ಸ್ಟೈಲಿಂಗ್ ಕಿಟ್ಸ್, ಮುಂಭಾಗದಲ್ಲಿ ಕ್ರೋಮ್ ಫಿನಿಶಿಂಗ್ ಗ್ರಿಲ್ ಸೇರಿ ಇನ್ನೂ ಹಲವು ಫೀಚರ್ಸ್ಗಳು ಈ ಕಾರಿನಲ್ಲಿವೆ.