ಬಳ್ಳಾರಿಯಲ್ಲಿ ಐವರು ಬಾಣಂತಿಯರು ಸಾವನ್ನಪ್ಪಿರುವ ಪ್ರಕರಣದ ಸಂಬಂಧ ತನಿಖೆ ನಡೆಯುತ್ತಿದ್ದು, ಔಷಧಿ ಸರಬರಾಜು ಮಾಡಿದ ಕಂಪನಿಗಳ ವಿರುದ್ಧ ನಾಲ್ಕು ಕ್ರಿಮಿನಲ್ ಕೇಸ್ ದಾಖಲಿಸುವಂತೆ ಅಧಿಕಾರಿಗಳು ಶಿಫಾರಸು ಮಾಡಲಿದ್ದಾರೆ. ಈ ಪ್ರಕರಣದ ಬಗ್ಗೆ ಬೆಂಗಳೂರಿನ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳ ತಂಡ, ಕರಡು ವರದಿ ಸಿದ್ಧಪಡಿಸಿದ್ದು ಕಳೆದ ವಾರವೇ ಪಶ್ಚಿಮ ಬಂಗಾಳಕ್ಕೆ ಹೋಗಿ ಐವಿ ಫ್ಲೂಯಿಡ್ ತಯಾರಿಕಾ ಘಟಕಕ್ಕೆ ಏಳು ಮಂದಿ ಅಧಿಕಾರಿಗಳ ತಂಡ ಭೇಟಿ ನೀಡಿ ಬಂದಿತ್ತು. ಇದೀಗ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಕೆಗೆ ಸಿದ್ಧಪಡಿಸಿಕೊಳ್ಳುತ್ತಿದೆ. ಅಲ್ಲದೇ ಸಾವಿಗೆ ಕಾರಣವಾಗಿರುವ ಔಷಧ ಸರಬರಾಜು ಮಾಡಿರುವ ಕಂಪನಿಗಳ ವಿರುದ್ಧ, ನಾಲ್ಕು ಕ್ರಿಮಿನಲ್ ಕೇಸ್ ದಾಖಲಿಸುವಂತೆ ಅಧಿಕಾರಿಗಳು ಸರ್ಕಾರಕ್ಕೆ ಶಿಫಾರಸು ಮಾಡಲಿದ್ದಾರೆ.