ದೇಶ

ರಕ್ಕಸ ಮಳೆಗೆ ಮುಳುಗಿದ ಮೆಕ್ಕಾ- ಮದೀನಾ, ಜೆಡ್ಡಾ ನಗರ

ಮೆಕ್ಕಾ ಮತ್ತು ಮದೀನಾದಲ್ಲಿ ಪ್ರವಾಹ ಉಕ್ಕಿ ಹರಿದಿದ್ದು ಹಲವು ವಾಹನಗಳು ಕೊಚ್ಚಿಹೋಗಿವೆ.. ಇಷ್ಟು ಮಾತ್ರವಲ್ಲದೇ ದೊಡ್ಡ..ದೊಡ್ಡ ಮರಗಳು, ಮನೆ ಬಳಕೆ ವಸ್ತುಗಳು ರಸ್ತೆ ಮೇಲೆ ಹರಿದು ನೀರಿನಲ್ಲಿ ತೇಲಿಕೊಂಡು ಹೋಗಿವೆ..

ಸೌದಿ ಅರೇಬಿಯಾ ಎಂದಾಕ್ಷಣ ನಮಗೆ ನೆನಪಾಗುವುದು ಮೆಕ್ಕಾ, ಮದೀನಾ ಮತ್ತು ಮರುಭೂಮಿ.. ಆದರೆ ಈಗ ಇಲ್ಲಿನ ಪರಿಸ್ಥಿತಿ ಬದಲಾಗಿದೆ.. ಭಾರಿ ಮಳೆಯ ನಂತರ ಕಂಡು ಕೇಳರಿಯದ ಪ್ರವಾಹ ಸೃಷ್ಟಿಯಾಗಿದೆ.. ಮೆಕ್ಕಾ ಮತ್ತು ಮದೀನಾ, ಜೆಡ್ಡಾ ನಗರ ಸೇರಿ ಹಲವು ಪ್ರದೇಶಗಳಲ್ಲಿ ಸುರಿದ ಆಲಿಕಲ್ಲು ಮತ್ತು ಗುಡುಗು ಸಹಿತ ಭಾರಿ ಮಳೆಗೆ ಅಲ್ಲೋಲ-ಕಲ್ಲೋಲವೇ ಸೃಷ್ಟಿಯಾಗಿದೆ.. ಮದೀನಾ ಪ್ರದೇಶದಲ್ಲಿಯೇ ಅತಿ ಹೆಚ್ಚು ಮಳೆ ಪ್ರಮಾಣ ದಾಖಲಾಗಿದೆ.. ಇನ್ನು ಭಾರಿ ಮಳೆಗೆ ಜೆಡ್ಡಾ, ಮೆಕ್ಕಾ ಮತ್ತು ಮದೀನಾದಲ್ಲಿ  ಪ್ರವಾಹ ಉಕ್ಕಿ ಹರಿದಿದ್ದು ಹಲವು ವಾಹನಗಳು ಕೊಚ್ಚಿಹೋಗಿವೆ.. ಇಷ್ಟು ಮಾತ್ರವಲ್ಲದೇ ದೊಡ್ಡ..ದೊಡ್ಡ ಮರಗಳು, ಮನೆ ಬಳಕೆ ವಸ್ತುಗಳು ರಸ್ತೆ ಮೇಲೆ ಹರಿದು ನೀರಿನಲ್ಲಿ ತೇಲಿಕೊಂಡು ಹೋಗಿವೆ.. ಭಯಂಕರ ಪ್ರವಾಹ ಸೃಷ್ಟಿ ಹಿನ್ನೆಲೆ 4000ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ.. ಜಲಾವೃತ ಪ್ರದೇಶ ಮತ್ತು ವಿದ್ಯುತ್ ಮೂಲಗಳಿಂದ ದೂರವಿರಲು ನಿವಾಸಿಗಳಿಗೆ ಎಚ್ಚರಿಕೆಗಳನ್ನು ನೀಡಿಲಾಗಿದೆ..