ತುಮಕೂರು : ಮದುವೆ ನೆಪದಲ್ಲಿ ಬಿಜೆಪಿಯ ಭಿನ್ನಮತಿಯರೆಂದು ಗುರುತಿಸಿಕೊಂಡಿರುವ ಕೆಲ ಪ್ರಮುಖ ನಾಯಕರು ಗೌಪ್ಯ ಸಭೆ ನಡೆಸಿದ್ದಾರೆ. ತುಮಕೂರಿನ ತಿಪಟೂರಿನಲ್ಲಿರುವ ಮಾಜಿ ಸಚಿವ ಬಿ.ಸಿ ನಾಗೇಶ್ ನಿವಾಸದಲ್ಲಿ ಬಿಜೆಪಿಯ ಭಿನ್ನಮತೀಯರ ಪಟ್ಟಿಗೆ ಸೇರಿದ ಬಸನಗೌಡ ಯತ್ನಾಳ್, ಕುಮಾರ ಬಂಗಾರಪ್ಪ, ಪ್ರತಾಪ ಸಿಂಹ, ಅರವಿಂದ ಲಿಂಬಾವಳಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಇತರೆ ನಾಯಕರು ಭಾಗಿಯಾಗಿ ಗೌಪ್ಯ ಸಭೆಯನ್ನ ನಡೆಸಿದರು.
ಮಾಜಿ ಸಿಎಂ ಯಡಿಯೂರಪ್ಪರ ಆಪ್ತ ಕಾರ್ಯದರ್ಶಿ ಎನ್ ಆರ್ ಸಂತೋಷ್ ರ ಸಹೋದರನ ಮದುವೆಗೆ ಬಂದಿದ್ದ ಇವರೆಲ್ಲರೂ ನಿನ್ನೆ ಸಂಜೆ ನಡೆದ ಆರತಕ್ಷತೆಯಲ್ಲಿ ಭಾಗಿಯಾಗಿದ್ರು. ಕೆಲಕಾಲ ಕಲ್ಯಾಣ ಮಂಟಪದಲ್ಲೇ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ. ಬಳಿಕ ಬಿ.ಸಿ.ನಾಗೇಶ್ ಅವರ ಮನೆಗೆ ತೆರಳಿ, ಅವರ ಮನೆಯಲ್ಲೂ ರಾಜಕೀಯ ಚರ್ಚೆ ನಡೆಸಿದ್ರು ಎಂಬ ಮಾಹಿತಿ ತಿಳಿದು ಬಂದಿದೆ.