ದೇಶ

ಡಾಲಿ 'ಜೀಬ್ರಾ' ಟ್ರೇಲರ್ ಥ್ರಿಲ್ಲಿಂಗ್ ರೈಡ್..ಆಕ್ಷನ್ ಜೊತೆಗೆ ಟ್ವಿಸ್ಟ್ ಅಂಡ್ ಟರ್ನ್..!

ಜೀಬ್ರಾ ಸಿನಿಮಾ ಸೂಪರ್ ಹಿಟ್ ಆಗಲಿ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದ ಮೆಗಾಸ್ಟಾರ್ ಚಿರಂಜೀವಿ, ಡಾಲಿ ಧನಂಜಯ್ ಕನ್ನಡದಲ್ಲಿ ಅದ್ಭುತ ನಟ ಧನಂಜಯ್. ತೆಲುಗಿನಲ್ಲಿ ಸ್ಟಾರ್ ಆಗ್ತಾರೆ ಎಂದು ಡಾಲಿಯನ್ನು ಕೊಂಡಾಡಿದ್ದಾರೆ.

ತೆಲುಗಿನ ಬಹುನಿರೀಕ್ಷಿತ ಮಲ್ಟಿಸ್ಟಾರ್ ಸಿನಿಮಾ ಜೀಬ್ರಾ ಬಿಡುಗಡೆಗೆ ಸಜ್ಜಾಗಿದ್ದು, ಇದೇ ತಿಂಗಳ 22ಕ್ಕೆ ತೆಲುಗು, ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರ ತೆರೆಗೆ ಬರೋದಿಕ್ಕೆ ಕೆಲ ದಿನಗಳಷ್ಟೇ ಬಾಕಿ ಇದ್ದು, ಪ್ರಚಾರ ಕೆಲಸಗಳು ಭರದಿಂದ ಸಾಗುತ್ತಿದೆ. ಅದರ ಭಾಗವಾಗಿ ನಿನ್ನೆ ಹೈದ್ರಾಬಾದ್ ನಲ್ಲಿ ಜೀಬ್ರಾ ಟ್ರೇಲರ್ ಇವೆಂಟ್ ನಡೆದಿದೆ. ಮೆಗಾಸ್ಟಾರ್ ಚಿರಂಜೀವಿ ಡಾಲಿ ಧನಂಜಯ್ ಹಾಗೂ ಸತ್ಯದೇವ್ ಚಿತ್ರಕ್ಕೆ ಸಾಥ್ ಕೊಟ್ಟರು. ಜೀಬ್ರಾ ಟ್ರೇಲರ್ ರಿಲೀಸ್ ಮಾಡಿ ಇಡೀ ತಂಡಕ್ಕೆ ಶುಭಾಷಯ ತಿಳಿಸಿದ್ದಾರೆ.
 
ಜೀಬ್ರಾ ಸಿನಿಮಾ ಸೂಪರ್ ಹಿಟ್ ಆಗಲಿ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದ ಮೆಗಾಸ್ಟಾರ್ ಚಿರಂಜೀವಿ, ಡಾಲಿ ಧನಂಜಯ್ ಕನ್ನಡದಲ್ಲಿ ಅದ್ಭುತ ನಟ ಧನಂಜಯ್. ತೆಲುಗಿನಲ್ಲಿ  ಸ್ಟಾರ್ ಆಗ್ತಾರೆ ಎಂದು ಡಾಲಿಯನ್ನು ಕೊಂಡಾಡಿದ್ದಾರೆ.

ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ ಅಂತಾ ಸಿಪಾಯಿ ಸಿನಿಮಾ ಹಾಡು ಹೇಳಿ ಚಿರಂಜೀವಿಗೆ ನಮಸ್ಕಾರ ಮಾಡಿದ ಡಾಲಿ ಧನಂಜಯ್, ಜೀಬ್ರಾ ಕನ್ನಡಕ್ಕೆ ತುಂಬಾ ಚೆನ್ನಾಗಿ ಡಬ್ ಮಾಡಲಾಗಿದೆ. ನಮ್ಮ ಡೇರ್ ಡೆವಿಲ್ ಮುಸ್ತಫಾ ಸಿನಿಮಾ ತಂಡ ಡಬ್ ಮಾಡಿದೆ. ನವೆಂಬರ್ 22ಕ್ಕೆ ಚಿತ್ರ ತೆರೆಗೆ ಬರುತ್ತಿದೆ. ನಿಮ್ಮ ಬೆಂಬಲವಿರಲಿ ಎಂದರು. 

'ಜೀಬ್ರಾ' ಕ್ರೈಂ ಥ್ರಿಲ್ಲರ್ ಸಿನಿಮಾ. ನೈಜ ಘಟನೆಗಳಿಂದ ಪ್ರೇರಣೆಗೊಂಡು ಕತೆ ಹೆಣೆಯಲಾಗಿದೆ. ಬ್ಯಾಂಕ್ ಫ್ರಾಡ್ ಸುತ್ತಾ ಚಿತ್ರದ ಕತೆ ಸುತ್ತಲಿದೆ. ಈಶ್ವರ್ ಕಾರ್ತಿಕ್ ನಿರ್ದೇಶನದ ಚಿತ್ರದಲ್ಲಿ ಸತ್ಯದೇವ್ ಹೀರೊ ಆಗಿ ನಟಿಸಿದ್ದಾರೆ. ಆದಿ ಎಂಬ ಖಡಕ್ ರೋಲ್‌ನಲ್ಲಿ ಧನಂಜಯ್ ಅಬ್ಬರಿಸಿದ್ದಾರೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆ.

ಧನಂಜಯ್‌ ಅಭಿನಯದ 26ನೇ ಸಿನಿಮಾ ಜೀಬ್ರಾಗೆ ರವಿ ಬಸ್ರೂರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಪ್ರಿಯಾ ಭವಾನಿ ಶಂಕರ್ ಹಾಗೂ ಜೆನ್ನಿಫರ್ ಪಿಕ್ಕಿನಾಟೊ ಪ್ರಮುಖ ಪಾತ್ರದಲ್ಲಿಯೇ ಇದ್ದಾರೆ. ಸತ್ಯ ಅಕಾಲ್ ಮತ್ತು ಸುನಿಲ್ ಚಿತ್ರದ ಇತರರು ತಾರಾಬಳಗದಲ್ಲಿದ್ದಾರೆ. 

ಎಸ್‌. ಎನ್‌. ರೆಡ್ಡಿ, ಎಸ್‌. ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್‌ ಸುಂದರಂ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.  ತೆಲುಗು, ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣವಿದೆ. ಎಸ್ ಶ್ರೀಲಕ್ಷ್ಮಿ ರೆಡ್ಡಿ ಸಹ ಚಿತ್ರದ ನಿರ್ಮಾಪಕಿ. ಅನಿಲ್ ಕ್ರಿಶ್ ಸಂಕಲನ, ಮೀರಾಖ್ ಸಂಭಾಷಣೆ ಸಿನಿಮಾಗಿದೆ.