ಕರ್ನಾಟಕ

ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಟ್ಯಾಂಕರ್​​​ ಪಲ್ಟಿ..ಭಾಗಶಃ ಹಾಲು ವ್ಯರ್ಥ

ರಸ್ತೆ ಬದಿಯಲ್ಲೇ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಭಾಗಶಃ ಹಾಲು ವ್ಯರ್ಥವಾಗಿದೆ. ಪೋಲಾಗುತ್ತಿದ್ದ ಹಾಲನ್ನು ತುಂಬಿಕೊಳ್ಳಲು ಬಿಂದಿಗೆ, ಕ್ಯಾನ್ ಹಿಡಿದು ಸ್ಥಳೀಯರು ಮುಗಿಬಿದ್ದಿದ್ರು. ಬಳಿಕ ಪೊಲೀಸರು ಕ್ರೇನ್ ಸಹಾಯದಿಂದ ಟ್ಯಾಂಕರ್​ ನ ಮೇಲೆತ್ತಿದರು.

ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಟ್ಯಾಂಕರ್ ಪಲ್ಟಿಯಾಗಿರುವ ಘಟನೆ, ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವಡ್ಡರಹಟ್ಟಿ ಬಳಿ ನಡೆದಿದೆ. ಬ್ಯಾಡನೂರು ಗ್ರಾಮದಿಂದ ಹಾಲು ತುಂಬಿಕೊಂಡು ಪಾವಗಡದ ಕಡೆ ಬರುವಾಗ ಹಾಲಿನ ಟ್ಯಾಂಕರ್ ಪಲ್ಟಿಯಾಗಿದೆ. 

ರಸ್ತೆ ಬದಿಯಲ್ಲೇ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಭಾಗಶಃ ಹಾಲು ವ್ಯರ್ಥವಾಗಿದೆ. ಪೋಲಾಗುತ್ತಿದ್ದ ಹಾಲನ್ನು ತುಂಬಿಕೊಳ್ಳಲು ಬಿಂದಿಗೆ, ಕ್ಯಾನ್ ಹಿಡಿದು ಸ್ಥಳೀಯರು ಮುಗಿಬಿದ್ದಿದ್ರು. ಬಳಿಕ ಪೊಲೀಸರು ಕ್ರೇನ್ ಸಹಾಯದಿಂದ ಟ್ಯಾಂಕರ್ ನ ಮೇಲೆತ್ತಿದರು.