ಮಂಡ್ಯ: ಬೆಂಗಳೂರಿನ ಕೆಂಗೇರಿಯಿಂದ ಶಬರಿ ಮಲೆಗೆ ಹೊರಟಿದ್ದ ಮಿನಿ ಬಸ್ ಅಪಘಾತಕ್ಕಿಡಾದ ಘಟನೆ ಮಂಡ್ಯದ ಬೆಂಗಳೂರು-ಮೈಸೂರು ನೂತನ ಹೈವೇನಲ್ಲಿ ನಡೆದಿದೆ. ಮಂಡ್ಯದ ಹೊರವಲಯದ ಸ್ಯಾಂಜೋ ಆಸ್ಪತ್ರೆ ಬಳಿ ಆಕ್ಸಲ್ ಕಟ್ಟಾಗಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.
ಮಿನಿ ಬಸ್ ನಲ್ಲಿದ್ದ ಸುಮಾರು 20ಕ್ಕೂ ಹೆಚ್ಚು ಜನರಲ್ಲಿ ಇಬ್ಬರಿಗೆ ಗಾಯವಾಗಿದೆ. ಗಾಯಾಳುಗಳಿಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಾಲಾಗಿದೆ.