ಮಂಡ್ಯ : ಸಿಎಂ ಸಿದ್ದರಾಮಯ್ಯ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ವಿಚಾರಕ್ಕೆ ಸಂಬಂದಿಸಿದಂತೆ ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರದ ಎನ್ ಡಿಎಯು ರೈತರ ಪರ ಅಂತ ಹೇಳುತ್ತಾರೆ. ಆದ್ರೆ ರಾಜ್ಯದ ಅಭಿವೃದ್ದಿ, ಜನಪರವಾದ ಕಾರ್ಯಕ್ರಮ ಮಾಡಿಲ್ಲ. ಕೇಂದ್ರದಿಂದ ನಮ್ಮ ಐದು ಗ್ಯಾರಂಟಿಗೆ ಟಕ್ಕರ್ ಕೊಡೋ ರೀತಿ ಒಂದು ಸರಿಸಮಾನವಾದ ಕಾರ್ಯಕ್ರಮ ಕೊಟ್ಟರೇ ನಾವು ಒಪ್ಪುತ್ತೇವೆ ಎಂದರು.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ , ಕೇಂದ್ರದಿಂದ ಅಕ್ಕಿ ಕೊಡದೇ ರಾಜಕಾರಣ ಮಾಡಿದ್ರು. ನೂರು ವರ್ಷದ ನಂತರ ಬಂದಂತಹ ಬರಗಾಲಕ್ಕೆ ಪರಿಹಾರ ಕೊಡಲಿಲ್ಲ. ಬಿಜೆಪಿ ಜೆಡಿಎಸ್ ನ ಯಾವ ಸಂಸದರು ಕೂಡ ಹೋರಾಟ ಮಾಡಲಿಲ್ಲ ಎಂದು ಹೇಳಿದರು. ಗ್ಯಾರಂಟಿ ಯೋಜನೆ ಬಗ್ಗೆ ಕೆಟ್ಟದಾಗಿ ಬಿಂಬಿಸಿದ್ರು. ಆದರೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಿಂತಿಲ್ಲ. ನಬಾರ್ಡ್ ನಿಂದ 2,340 ಕೋಟಿ ಅನುದಾನ ಕೊಟ್ಟಿದ್ದಾರೆ. ಅನುದಾನವನ್ನ 58 ಪರ್ಸೆಂಟ್ ಇಳಿಸಿದ್ದಾರೆ. ಇದು ರೈತರ ಮೇಲೆ ಎಫೆಕ್ಟ್ ಆಗುತ್ತದೆ. ಈ ರೀತಿ ಮಾಡೋದ್ರಿಂದ ರೈತರಿಗೆ ಯಾವ ಸಂದೇಶ ಕೊಡುತ್ತಾರೆ ಅಂತ ಕಿಡಿಕಾರಿದರು.