ರಥಸಪ್ತಮಿ ಹಿನ್ನೆಲೆ ಮೇಲುಕೋಟೆಗೆ ಸಚಿವ ಚಲುವರಾಯಸ್ವಾಮಿ ಕುಟುಂಬಸ್ಥರ ಭೇಟಿ ನೀಡಿದ್ದಾರೆ. ಮೇಲುಕೋಟೆ ಚಲುವನಾರಾಯಣಸ್ವಾಮಿ, ಸಚಿವ ಚಲುವರಾಯಸ್ವಾಮಿ ಮನೆ ದೇವರಾಗಿದ್ದು, ಕುಟುಂಬ ಸಮೇತರಾಗಿ ಚಲುವನಾರಾಯಣನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರಥಸಪ್ತಮಿ ಹಿನ್ನೆಲೆ ಪ್ರತಿ ವರ್ಷ ಜನಪದ ಕಲಾಮೇಳ ನಡೆಸಿಕೊಂಡು ಬರಲಾಗುತ್ತಿದೆ. ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ವತಿಯಿಂದ 26ನೇ ವರ್ಷದ ಅಂತರರಾಜ್ಯ ಮಟ್ಟದ ಜನಪದ ಕಲಾಮೇಳ ಆಯೋಜಿಸಿದ್ದು, ಜನಪದ ಕಲಾಮೇಳಕ್ಕೆ ಸಚಿವ ಎನ್.ಚಲುವರಾಯಸ್ವಾಮಿಯಿಂದ ಚಾಲನೆ ನೀಡಿದ್ದಾರೆ. ಅಂತರರಾಜ್ಯ ಮಟ್ಟದ ಜನಪದ ಕಲಾಮೇಳದಲ್ಲಿ 50ಕ್ಕೂ ಹೆಚ್ಚು ಜನಪದ ಕಲಾ ತಂಡಗಳು ಭಾಗಿಯಾಗಿದ್ದು, ವೀರಗಾಸೆ, ಪೂಜಾ ಕುಣಿತ, ಪಟದ ಕುಣಿತ, ಗಾರುಡಿ ಗೊಂಬೆ, ತಮಟೆ, ನಗಾರಿ, ಹುಲಿ ವೇಷ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಕಣ್ಮನ ಸೆಳೆಯುತ್ತಿವೆ.