ಕರ್ನಾಟಕ

"ಕಿರಿಕ್" ಟ್ರೈಲರ್ ಬಿಡುಗಡೆ ಮಾಡಿದ ಸಚಿವ ಚೆಲುವರಾಯಸ್ವಾಮಿ

ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಕೆಲಸ ಮಾಡುವ ನಾಯಕ, ಸದಾ ಕಿರಿಕ್ ಮಾಡೋ ನಾಯಕಿ ಇಬ್ಬರ ಮಧ್ಯೆ ಕಿರಿಕ್, ತರ್ಲೆಯಿಂದಲೇ ಸೂರ್ಯ ಮತ್ತು ಅಮ್ಮು ನಡುವೆ ಹುಟ್ಟಿದ ಪ್ರೀತಿ ಆನಂತರ ಯಾವ ಹಂತ ತಲುಪುತ್ತದೆ, ಕೊನೆಗೇನಾಯಿತು ಎನ್ನುವುದೇ ಕಿರಿಕ್ ಚಿತ್ರದ ಕಥಾಹಂದರ. ಈ ಚಿತ್ರಕ್ಕಾಗಿ ಕಾರ್ತೀಕ್ ವೆಂಕಟೇಶ್ ರಚಿಸಿದ ತಾಯಿ ಸೆಂಟೆಮೆಂಟ್ ಸಾಂಗ್ ನ್ನು ಡಾ.ವಿ. ನಾಗೇಂದ್ರಪ್ರಸಾದ್ ಅವರು ಬಿಡುಗಡೆ ಮಾಡಿ, ಈ ಸಿನಿಮಾ ಖಂಡಿತ ಗೆದ್ದೇ ಗೆಲ್ಲುತ್ತೆ ಎಂದು ಹೇಳಿದರು.

ನಾಗತಿಹಳ್ಳಿ ಗಂಗಾಧರಗೌಡ ಅವರ ನಿರ್ದೇಶನದ, ರವಿ ಶೆಟ್ಟಿ,  ಪೂಜಾ ರಾಮಚಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಕಿರಿಕ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ..ಸಚಿವ ಎನ್. ಚೆಲುವರಾಯಸ್ವಾಮಿ ಕಿರಿಕ್ ಚಿತ್ರದ ಟ್ರೈಲರ್ ರಿಲೀಸ್ ಮಾಡಿದರೆ, ಸಾಹಿತಿ ನಾಗೇಂದ್ರ ಪ್ರಸಾದ್, ನಟ ಚೇತನ್ ಹಾಗೂ ಚೆಲುವರಾಯಸ್ವಾಮಿ ಅವರ ಪುತ್ರ ಸಚಿನ್ ೩ ಲಿರಿಕಲ್ ಹಾಡುಗಳನ್ನು ಬಿಡುಗಡೆಗೊಳಿಸಿದರು.

ಗ್ಯಾರೇಜ್ ನಲ್ಲಿ  ಮೆಕ್ಯಾನಿಕ್ ಕೆಲಸ ಮಾಡುವ ನಾಯಕ, ಸದಾ ಕಿರಿಕ್ ಮಾಡೋ ನಾಯಕಿ ಇಬ್ಬರ ಮಧ್ಯೆ ಕಿರಿಕ್, ತರ್ಲೆಯಿಂದಲೇ ಸೂರ್ಯ ಮತ್ತು ಅಮ್ಮು ನಡುವೆ ಹುಟ್ಟಿದ ಪ್ರೀತಿ ಆನಂತರ ಯಾವ ಹಂತ ತಲುಪುತ್ತದೆ, ಕೊನೆಗೇನಾಯಿತು ಎನ್ನುವುದೇ ಕಿರಿಕ್ ಚಿತ್ರದ ಕಥಾಹಂದರ. ಈ ಚಿತ್ರಕ್ಕಾಗಿ ಕಾರ್ತೀಕ್ ವೆಂಕಟೇಶ್ ರಚಿಸಿದ  ತಾಯಿ ಸೆಂಟೆಮೆಂಟ್ ಸಾಂಗ್ ನ್ನು  ಡಾ.ವಿ. ನಾಗೇಂದ್ರಪ್ರಸಾದ್ ಅವರು  ಬಿಡುಗಡೆ ಮಾಡಿ, ಈ ಸಿನಿಮಾ ಖಂಡಿತ ಗೆದ್ದೇ ಗೆಲ್ಲುತ್ತೆ  ಎಂದು ಹೇಳಿದರು.

ಮುಕ್ತಿನಾಗ ಫಿಲಂಸ್ ಅರ್ಪಿಸುವ ಈ ಚಿತ್ರವನ್ನು ನಾಗರಾಜ್ ಎಸ್. ನಿರ್ಮಿಸಿದ್ದಾರೆ. ಹರೀಶ್ ಶೆಟ್ಡಿ ಸಹ ನಿರ್ಮಾಪಕರಾಗಿ ಕೈಜೋಡೊಸಿದ್ದಾರೆ. ಆರ್.ಬಿ. ಭರತ್ ಅವರ ಸಂಗೀತ ಸಂಯೋಜನೆ, ಎಸ್.ಕೀರ್ತಿವರ್ಧನ್ ಅವರ ಛಾಯಾಗ್ರಹಣ, ರಾಕೆಟ್ ವಿಕ್ರಂ ಹಾಗೂ ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದ್ದು ಬಲ ರಾಜವಾಡಿ, ಹೊನ್ನವಳ್ಳಿ ಕೃಷ್ಣ, ಕುರಿ ರಂಗ,  ಸದಾನಂದ ಕಾಳೆ, ರಾಧಿಕಾ ಶೆಟ್ಟಿ, ಜ್ಯೋತಿ ಮರೂರು ಚಿತ್ರದ ಉಳಿದ ತಾರಾಬಳಗದಲ್ಲಿದ್ದಾರೆ.