ಕರ್ನಾಟಕ

ಹಾಸನ ಸಮಾವೇಶಕ್ಕೆ ತೆರಳುತ್ತಿದ್ದ ಸಚಿವ ಕೆ.ಎಚ್‌.ಮುನಿಯಪ್ಪ ಕಾರು ಅಪಘಾತ

ಹಾಸನದಲ್ಲಿ ಜನ ಕಲ್ಯಾಣ ಸಮಾವೇಶ ಹಿನ್ನಲೆ ಸಮಾವೇಶಕ್ಕೆ ಬರುತ್ತಿರುವಾಗ ಸಚಿವ ಮುನಿಯಪ್ಪನವರ ಕಾರು ಅಫಘಾತಕ್ಕೀಡಾಗಿದೆ.

ಹಾಸನ: ಹಾಸನದಲ್ಲಿ ಜನ ಕಲ್ಯಾಣ ಸಮಾವೇಶ ಹಿನ್ನಲೆ ಸಮಾವೇಶಕ್ಕೆ ಬರುತ್ತಿರುವಾಗ ಸಚಿವ ಮುನಿಯಪ್ಪನವರ ಕಾರು ಅಫಘಾತಕ್ಕೀಡಾಗಿದೆ. ಸಚಿವ ಕೆ.ಎಚ್‌. ಮುನಿಯಪ್ಪನವರಿದ್ದ ಕಾರಿಗೆ ಹಿಂಬದಿಯಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಹಾಸನದ ಶಾಂತಿಗ್ರಾಮದ ಟೋಲ್ ಬಳಿ ಘಟನೆ ನಡೆದಿದ್ದು, ಸದ್ಯ ಕಾರಿನಲ್ಲಿದ್ದ ಸಚಿವರಿಗೆ ಯಾವುದೆ ಗಾಯ ಆಗಿಲ್ಲ ಎಂದು ತಿಳಿದು ಬಂದಿದೆ. ಸದ್ಯ ಮುನಿಯಪ್ಪನವರಿದ್ದ ಕಾರಿಗೆ ಸಣ್ಣಪುಟ್ಟ ಡ್ಯಾಮೇಜ್‌ ಆಗಿದ್ದು, ಅವರು ಬೇರೆ ಕಾರಿನಲ್ಲಿ ಸಮಾವೇಶಕ್ಕೆ ತೆರಳಿದ್ದಾರೆ.