ಕರ್ನಾಟಕ

ಗಾಯಾಳುಗಳನ್ನ ವಿಚಾರಿಸಿದ ಸಚಿವ ಸಂತೋಷ್​ ಲಾಡ್​.

ಅಪಘಾತದಲ್ಲಿ ಒಟ್ಟು 19 ಜನ ಗಾಯಗೊಂಡು, ಒಬ್ಬರು ಮೃತಪಟ್ಟಿದ್ದು ಮೃತರ ಕುಟುಂಬಕ್ಕೆ ಸಾಂತ್ವಾನ ತಿಳಿಸಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ​

ಮಾನ್ಯ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸಂತೋಷ್ ಲಾಡ್ ರವರು ಇಂದು ಕಲಘಟಗಿ ಪಟ್ಟಣದ ಹೊರ ವಲಯದ ತಡಸ್ ಕ್ರಾಸ್‌ ಬಳಿ  ಲಾರಿ ಮತ್ತು ಟಾಟಾ ಏಸ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್‌ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಅಪಘಾತದಲ್ಲಿ ಒಟ್ಟು 19  ಜನ ಗಾಯಗೊಂಡು, ಒಬ್ಬರು ಮೃತಪಟ್ಟಿದ್ದು ಮೃತರ ಕುಟುಂಬಕ್ಕೆ ಸಾಂತ್ವಾನ ತಿಳಿಸಿ  ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.