ಕರ್ನಾಟಕ

ವರಿಷ್ಠರ ಮಾತಿಗೂ ಕಾಂಗ್ರೆಸ್‌ನಲ್ಲಿ ಸಚಿವರು ಡೋಂಟ್‌ಕೇರ್‌..?

ವಾಲ್ಮೀಕಿ ಜಾತ್ರೆ ವಿಚಾರವಾಗಿ ಸಮುದಾಯದ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಚರ್ಚೆಗೆ ಬಂದಿರುವಾಗಲೇ ರಾಜಕೀಯದ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ. ಮುಖ್ಯಮಂತ್ರಿ ಕುರ್ಚಿ, ಕೆಪಿಸಿಸಿ ಸ್ಥಾನದ ಮೇಲೆ ಸಚಿವರು ಕಣ್ಣಿಟ್ಟಿದ್ದು, ಮಧ್ಯರಾತ್ರಿ ಮೀಟಿಂಗ್‌ ಮಾಡಿರೋದಕ್ಕೆ ಹಲವು ಕಾರಣಗಳಿವೆ ಎನ್ನಲಾಗ್ತಿದೆ.

ಹೈಕಮಾಂಡ್‌ ನಾಯಕರ ಮಾತಿಗೂ ಕಾಂಗ್ರೆಸ್‌ನಲ್ಲಿ ಸಚಿವರು ಡೋಂಟ್‌ಕೇರ್‌ ಎಂದ್ರಾ ಎನ್ನುವ ಪ್ರಶ್ನೆ ಇದೀಗ ಎದುರಾಗಿದೆ. ಏಕೆ ಅಂದರೆ ನಿನ್ನೆ ವಿಧಾನಸೌಧದ ಸಚಿವ ಕೊಠಡಿಯಲ್ಲಿ ಜಿ. ಪರಮೇಶ್ವರ್‌, ಸತೀಶ್‌ ಜಾರಕಿಹೊಳಿ, ಕೆ.ಎನ್.ರಾಜಣ್ಣ, ಹೆಚ್.ಸಿ.ಮಹದೇವಪ್ಪ ಒಟ್ಟಿಗೆ ಸೇರಿ ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಮಧ್ಯೆ ಸಿಎಂ ಕುರ್ಚಿ ಫೈಟ್‌ ನಡೆಯುತ್ತಿರುವ ಮಧ್ಯೆಯೇ ಸಚಿವರು ಸಭೆ ನಡೆಸಿರೋದು ಕುತೂಹಲಕ್ಕೆ ಕಾರಣವಾಗಿದೆ. ವಾಲ್ಮೀಕಿ ಜಾತ್ರೆ ವಿಚಾರವಾಗಿ ಸಮುದಾಯದ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಚರ್ಚೆಗೆ ಬಂದಿರುವಾಗಲೇ ರಾಜಕೀಯದ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ. ಮುಖ್ಯಮಂತ್ರಿ ಕುರ್ಚಿ, ಕೆಪಿಸಿಸಿ ಸ್ಥಾನದ ಮೇಲೆ ಸಚಿವರು ಕಣ್ಣಿಟ್ಟಿದ್ದು, ಮಧ್ಯರಾತ್ರಿ ಮೀಟಿಂಗ್‌ ಮಾಡಿರೋದಕ್ಕೆ ಹಲವು ಕಾರಣಗಳಿವೆ ಎನ್ನಲಾಗ್ತಿದೆ.