ಕರ್ನಾಟಕ

ಮಹಿಳೆಯರ ಜೊತೆ ದುರ್ವರ್ತನೆ...ಕಾಮುಕ ಅರೆಸ್ಟ್..!

ಮಹಿಳೆಯರಿಗೆ ಬ್ಯಾಡ್‌ ಟಚ್‌ ಮಾಡಿ ಎಸ್ಕೇಪ್‌ ಆಗುತ್ತಿದ್ದ ಬೀದಿ ಕಾಮಣ್ಣನೊಬ್ಬ, ಬೆಎಂಗಳೂರಿನಲ್ಲಿ ಅರೆಸ್ಟ್‌ ಆಗಿದ್ದಾನೆ.

ಮಹಿಳೆಯರಿಗೆ ಬ್ಯಾಡ್‌ ಟಚ್‌ ಮಾಡಿ ಎಸ್ಕೇಪ್‌ ಆಗುತ್ತಿದ್ದ ಬೀದಿ ಕಾಮಣ್ಣನೊಬ್ಬ, ಬೆಎಂಗಳೂರಿನಲ್ಲಿ ಅರೆಸ್ಟ್‌ ಆಗಿದ್ದಾನೆ. ಖಾಸಗಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ವ್ಯಕ್ತಿ ಇಸ್ಲಾಂವುದ್ದೀನ್ (31) ಬಂಧಿತ ಆರೋಪಿ ಎನ್ನಲಾಗಿದೆ. ಬನಶಂಕರಿ ಎರಡನೇ ಹಂತದಲ್ಲಿ 36 ವರ್ಷದ ಮಹಿಳೆಗೆ ಬ್ಯಾಡ್‌ ಟಚ್‌ ಮಾಡಿ ಎಸ್ಕೇಪ್‌ ಆಗಿದ್ದ ಆರೋಪಿ ವಿರುದ್ಧ ಮಹಿಳೆ ದೂರು ದಾಖಲಿಸಿದ್ದರು. ಮಹಿಳೆಯ ದೂರಿನನ್ವಯ ಬನಶಂಕರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಒಬ್ಬಂಟಿಯಾಗಿ ರಸ್ತೆಯಲ್ಲಿ ಓಡಾಡೋ ಮಹಿಳೆಯರನ್ನ ಟಾರ್ಗೆಟ್ ಮಾಡ್ತಿದ್ದ ಆರೋಪಿ, ಬೈಕ್‌ನಲ್ಲಿ ಹಿಂಬದಿಯಿಂದ ಫಾಲೋ ಮಾಡುತ್ತಿದ್ದ. ಮಹಿಳೆ ಜೊತೆಯಾಗಿ ಯಾರು ಇಲ್ಲ ಅನ್ನೊದು ಕನ್ಫರ್ಮ್ ಆಗ್ತಿದ್ದಂತೆ ಬ್ಯಾಡ್ ಟಚ್ ಮಾಡ್ತಿದ್ದ. ಬ್ಯಾಡ್ ಟಚ್ ಮಾಡಿ ಬೈಕ್ ನಲ್ಲಿ ಎಸ್ಕೇಪ್ ಆಗ್ತಿದ್ದ ಆರೋಪಿ ಇಸ್ಲಾಂವುದ್ದೀನ್ ಇದೀಗ ಖಾಕಿ ಅತಿಥಿಯಾಗಿದ್ದಾನೆ.