ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಿಡಿಗೇಡಿಗಳ ಅಟ್ಟಹಾಸ ಜೋರಾಗಿದ್ದು, ಫ್ರೀಯಾಗಿ ಸೆಗರೇಟ್ ಕೊಡದಿದ್ದಕ್ಕೆ ಬೇಕರಿ ಯುವಕನ ಮೇಲೆ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಲಾಗಿದೆ. ಚಿಕ್ಕಬಿದರಿಕಲ್ಲು ಮುಖ್ಯರಸ್ತೆಯಲ್ಲಿ ಆನಂದ್ ಎಂಬ ವ್ಯಕ್ತಿ ಅಟ್ಟಹಾಸ ಮೆರೆದಿದ್ದು, ಕುಡಿದ ನಶೆಯಲ್ಲಿದ್ದ ಆನಂದ್ ಎಂಬಾತ ಫ್ರೀಯಾಗಿ ಸೆಗರೇಟ್ ಕೊಡದಿದ್ದಕ್ಕೆ ಗ್ರಾಹಕರನ್ನು ಅಡ್ಡಗಟ್ಟಿ ಬೇಕರಿ ಯುವಕನಿಗೆ ಧಮ್ಕಿ ಹಾಕಿದ್ದಾನೆ.
ಕಾಂಡಿಮೆಟ್ಸ್ ಬೇಕರಿಯಲ್ಲಿರುವ ವಸ್ತುಗಳನ್ನ ಚೆಲ್ಲಾಪಿಲ್ಲಿ ಮಾಡಿ ಧಾಂಧಲೆ ಮಾಡಿದ್ದಲ್ಲದೇ ಅಂಗಡಿಯನ್ನ ಮುಚ್ಚಿಸ್ತೀನಿ ಎಂದು ಅವಾಜ್ ಹಾಕಿದ್ದಾನೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿ ಬಂಧನಕ್ಕೆ ಕಾರ್ಮಿಕ ಪರಿಷತ್ ಒತ್ತಾಯಿಸುತ್ತಿದೆ.