ಕರ್ನಾಟಕ

ಪಕ್ಷದಲ್ಲಿ ದಾರಿ ತಪ್ಪಿಸುವ ಕೆಲಸ ಆಗುತ್ತಿದೆ; ಕಟ್ಟಾ ಸುಬ್ರಹ್ಮಣ್ಯ ನಾಯ್ಡು

ರೆಬೆಲ್ಸ್‌ ನಾಯಕರ ವಿರುದ್ಧ ಮಾತನಾಡಿದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು, ದಾರಿ ತಪ್ಪಿಸುವ ಕೆಲಸ ಆಗ್ತಿದೆ ಎಂದು ಹೇಳಿಕೆ ನೀಡಿದ್ದಾರೆ.

ಬಿಜೆಪಿ ರೆಬೆಲ್‌ ನಾಯಕರಿಗೆ ಟಕ್ಕರ್‌ ಕೊಡಲು, ಇಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ನಿವಾಸದಲ್ಲಿ ರೇಣುಕಾಚಾರ್ಯ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು, ನಾವು ಇಷ್ಟು ಸಮಯ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಿದ್ವಿ ಎಂದು ತಿಳಿಸಿದರು. ಅಲ್ಲದೇ ರೆಬೆಲ್‌ ನಾಯಕರ ವಿರುದ್ಧ ಮಾತನಾಡಿದ ಅವರು, ಅವರಿವರ ಕೈ ಹಿಡಿದುಕೊಂಡು ಹೈಕಮಾಂಡ್ ನಾಯಕರ ಭೇಟಿಗೆ ಪ್ರಯತ್ನ ಮಾಡ್ತಿದ್ದಾರೆ..ದಾರಿ ತಪ್ಪಿಸುವ ಕೆಲಸ ಆಗ್ತಿದೆ.. ಇವರಿಂದ ಪಕ್ಷಕ್ಕೆ ಉಪಯೋಗ ಇಲ್ಲ. ಮೈಲೇಜ್ ಬರುತ್ತೆ ಅಂತ ಕೆಲವರು ಮಾತನಾಡ್ತಿದ್ದಾರೆ. ನಾವು ಶಾಸಕರಾಗಿದ್ದಾಗ ಪಕ್ಷದ ವಿರುದ್ಧ ನಾವು ಯಾವತ್ತು ಮಾತನಾಡಿಲ್ಲ. ಇದೇ ಪಕ್ಷದಲ್ಲಿ ಶಾಸಕರಾಗಿ ರಾಜ್ಯಾಧ್ಯಕ್ಷ ವಿರುದ್ಧ ಮಾತನಾಡ್ತಿದ್ದಾರೆ. ಆದರೆ ರಾಜ್ಯಾಧ್ಯಕ್ಷರ ಪರ 90% ಜನ ಇದ್ದಾರೆ ಎಂದು ಹೇಳಿದ್ದಾರೆ. 

ಒಂದೇ ಕುಟುಂಬದಲ್ಲಿ ಇಬ್ಬರು ಅಣ್ಣತಮ್ಮಂದಿರು ರಾಜಕೀಯದಲ್ಲಿ ಇದ್ರೆ ಅದು ಅವರಿಗೆ ಕುಟುಂಬ ರಾಜಕೀಯ ಆಗಲ್ಲ. ಇವರ ಬಗ್ಗೆ ಮಾತನಾಡೋರಿಗೆ ಅವರ ನಿಷ್ಠೆ ಬಗ್ಗೆ ಗೊತ್ತಾಗುತ್ತೆ.  ಐದಾರು ಜನ ರಾಜಕೀಯದಲ್ಲಿ ಇದ್ದು,  ಎಲ್ಲ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿರುವವರೇ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಪಕ್ಷ ಕಟ್ಟಿದವರು ರಾಜ್ಯಾಧ್ಯಕ್ಷರು ಆದ್ರೆ ಯಾವುದೇ ಸಮಸ್ಯೆ ಇಲ್ಲ. ಹೊಸದಾಗಿ ಬಂದವರು, ಪಕ್ಷದ ವಿರುದ್ಧ ಮಾತನಾಡುವವರು ಪಕ್ಷದವರು ಅಲ್ಲ. ಬಿಎಸ್‌ವೈ,‌ ಸದಾನಂದಗೌಡ ಸೇರಿದಂತೆ ಹಿರಿಯರು ದಕ್ಷಿಣ ಭಾರತದಲ್ಲಿ ಪಕ್ಷ ಕಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.