ಅಡಿಲೇಡ್: ಅಡಿಲೇಡ್‌ನಲ್ಲಿ ಆರಂಭವಾಗಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನ ಮೊದಲ ಬಾಲ್ ನಲ್ಲೇ ಯಶಸ್ವಿ ಜೈಸ್ವಾಲ್ ಔಟಾದರು. ಜೈಸ್ವಾಲ್ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಸೇಡು ತೀರಿಸಿಕೊಂಡಿದಾರೆ.
ಪರ್ತ್ ಟೆಸ್ಟ್ ನ ಎರಡನೇ ಇನಿಂಗ್ಸ್ ನಲ್ಲಿ ಆಕರ್ಷಕ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ ಆಸ್ಟ್ರೇಲಿಯಾ ವೇಗಿ ಸ್ಟಾರ್ಕ್‌ಗೆ ಸ್ಲೋ ಆಗಿ ಬೌಲಿಂಗ್ ಮಾಡ್ತೀರಾ ಎಂದು ಕೆಣಕಿದ್ದರು. ಈ ಹಿನ್ನೆಲೆಯಲ್ಲಿ ಸ್ಟಾರ್ಕ್ ಎರಡನೇ ಪಂದ್ಯದಲ್ಲಿ ಮೊದಲ ಎಸೆತದಲ್ಲಿಯೇ ಜೈಸ್ವಾಲ್ ರನ್ನ ಡಕ್ ಔಟ್ ಮಾಡುವ ಮೂಲಕ ಸ್ವೀಟ್ ರಿವೇಂಜ್ ತೀರಿಸಿಕೊಂಡಿದಾರೆ.
ಇನ್ನು ಈ ಘಟನೆ ಕುರಿತು ಗುರುವಾರ ಪ್ರತಿಕ್ರಿಯೆ ನೀಡಿದ್ದ ಸ್ಟಾರ್ಕ್ ಪರ್ತ್ ಪಂದ್ಯದಲ್ಲಿ ಜೈಸ್ವಾಲ್ ಅವರ ಮಾತುಗಳು ಕೇಳಿಸಿರಲಿಲ್ಲ. ಈ ಹಿಂದೆ ನಾನು ಕೆಣಕಿದ ಆಟಗಾರರನ್ನು ಸುಮ್ಮನೇ ಬಿಡುತ್ತಿರಲಿಲ್ಲ. ಈಗ ಹೆಚ್ಚೇನು ಕೆಣಕಲು ಹೋಗುವುದಿಲ್ಲʼ ಎಂದು ಸ್ಟಾರ್ಕ್ ನಗುಮೊಗದಿಂದಲೇ ಉತ್ತರಿಸಿದ್ದರು.
ಇನ್ನು ಪರ್ತ್ ಟೆಸ್ಟ್‌ನ ಮೊದಲ ಇನಿಂಗ್ಸ್ ನಲ್ಲಿ ಡಕ್ ಔಟ್ ಆಗಿದ್ದ ಜೈಸ್ವಾಲ್ ಎರಡನೇ ಇನಿಂಗ್ಸ್ ನಲ್ಲಿ 161 ರನ್ ಗಳಿಸಿದ್ದರು. ಈಗ ಅಡಿಲೇಡ್ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲೂ ಸಹ ಜೈಸ್ವಾಲ್ ಶೂನ್ಯಕ್ಕೆ ಔಟಾಗಿದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ ಮೊದಲ ಎಸೆತದಲ್ಲೇ ಆಘಾತ ಎದುರಾಗಿತ್ತು. ಆದರೆ ಆ ಬಳಿಕ ಕೆ.ಎಲ್. ರಾಹುಲ್ ಮತ್ತು ಶುಭಮಾನ್ ಗಿಲ್ 69 ರನ್ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ನೀಡಿದರು. ಆದರೆ ರಾಹುಲ್ 37 ರನ್ ಗಳಿಸಿ ಔಟಾದರೆ, ಗಿಲ್ 31 ರನ್‌ಗೆ ಔಟಾದರು. ವಿರಾಟ್ ಕೊಹ್ಲಿ 7 ರನ್ ಗಳಿಸಿ ಔಟ್ ಆಗಿದ್ದಾರೆ. ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 4 ವಿಕೆಟ್ ನಷ್ಟಕಕೆ 82 ರನ್ ಗಳಿಸಿದೆ.