ಮುಡಾದಲ್ಲಿ 50:50 ಅನುಪಾತದ ನಿವೇಶನ ಹಂಚಿಕೆ ಪ್ರಕರಣ ರಾಜ್ಯದೆಲ್ಲೆಡೆ ದೊಡ್ಡ ಸಂಚಲನ ಸೃಷ್ಟಿಸಿದೆ. ನಿವೇಶನಗಳಲ್ಲಿ ವಿವಾದಾತ್ಮಕ ನಿವೇಶನ ಎಂದು ಬೋರ್ಡ್ ಹಾಕಿ ಎಂದು, ಶಾಸಕ ಶ್ರೀವತ್ಸ ಒತ್ತಾಯಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಮುಡಾದಲ್ಲಿ ಹಲವು ದಾಖಲೆಗಳು ನಾಪತ್ತೆಯಾಗಿವೆ. ಕೆಲವರು ದಾಖಲೆಗಳನ್ನ ಹೊತ್ತೊಯ್ದಿದ್ದಾರೆ ಎಂಬ ಮಾಹಿತಿ ಇದೆ. ಅರ್ಹರು ಯಾರು, ನಿವೇಶನ ಪಡೆದವರು ಯಾರು ಎಂಬುದರ ಮಾಹಿತಿ ಇಲ್ಲವಾಗಿದೆ. ಹೀಗಾಗಿ 50:50 ಅನುಪಾತದ ಎಲ್ಲಾ ನಿವೇಶನಗಳಿಗೂ ವಿವಾದಾತ್ಮಕ ನಿವೇಶನ ಅಂತಾ ನಾಮಫಲಕ ಹಾಕಿ ಎಂದಿದ್ದಾರೆ.
ಈ ರೀತಿಯಾದರೂ ನಿವೇಶನಕ್ಕೆ ಸಂಬಂಧಿಸಿದವರ ಮಾಹಿತಿ ಸಿಗುತ್ತದೆ. ಕಾನೂನು ಬಾಹಿರವಾಗಿ ನಿವೇಶನ ಪಡೆದಿರುವವರ ಬಗ್ಗೆಯೂ ಮಾಹಿತಿ ಸಿಗುತ್ತದೆ ಎಂದು ಹೇಳಿದ್ದಾರೆ.