ವಾಷಿಂಗ್ಟನ್: ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಗೆಳತಿ ಶಿವೋನ್ ಜಿಲಿಸ್ ಮತ್ತು ಅವರ ಮೂವರು ಮಕ್ಕಳೊಂದಿಗೆ ವಾಷಿಂಗ್ಟನ್‌ನಲ್ಲಿ ಭೇಟಿಯಾಗಿದ್ದಾರೆ. ಬ್ಲೇರ್ ಹೌಸ್‌ನಲ್ಲಿ ನಡೆದ ಸಭೆಯ ನಂತರ, ಪ್ರಧಾನಿ ಮೋದಿ ಮಸ್ಕ್ ಅವರ ಮಕ್ಕಳಿಗೆ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ "ದಿ ಕ್ರೆಸೆಂಟ್ ಮೂನ್", ಹಾಗೂ ದಿ ಗ್ರೇಟ್ ಆರ್‌ಕೆ ನಾರಾಯಣ್ ಕಲೆಕ್ಷನ್ ಮತ್ತು ಪಂಡಿತ್ ವಿಷ್ಣು ಶರ್ಮಾ ಅವರ ಪಂಚತಂತ್ರ ಎಂಬ ಮೂರು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಶ್ರೀ ಎಲೋನ್ ಮಸ್ಕ್ ಅವರ ಕುಟುಂಬವನ್ನು ಭೇಟಿಯಾಗಲು ಮತ್ತು ವಿವಿಧ ವಿಚಾರಗಳ ಬಗ್ಗೆ ಗ್ಗೆ ಮಾತನಾಡಲು ಸಂತೋಷವಾಯಿತು" ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.