ದೇಶ

ಮೋದಿ ವರ್ಚಸ್ಸು ಕಮ್ಮಿಯಾಗಿದೆ, 4 ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತಾರೆ : KJ ಜಾರ್ಜ್

ಜನರು ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ಒಳ್ಳೆಯ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ಬಿಜೆಪಿಯಂತೆ ಕೋಮುಭಾವನೆ ಹಾಗೂ ಜಾತಿ ಧರ್ಮಗಳ ಗಲಾಟೆಯ ಮೂಲಕ ರಾಜಕಾರಣ ಮಾಡಿಲ್ಲ. ಜನರ ಆಶೀರ್ವಾದವು ಕಾಂಗ್ರೆಸ್ ಪಕ್ಷಕ್ಕೆ ಇದ್ದು, ಕಾರ್ಯಕರ್ತರಿಗೂ ಒಳ್ಳೆಯ ಅವಕಾಶ ಸಿಗಲಿದೆ ಎಂದು ಕೆ.ಜೆ ಜಾರ್ಜ ಹೇಳಿದ್ದಾರೆ.

ಕೋಲಾರ : ಮೋದಿಯವರ ವರ್ಚಸ್ಸು ಮುಗಿದಿದೆ. ಇನ್ನೂ ನಾಲ್ಕು ತಿಂಗಳಲ್ಲಿ ಮೋದಿ ಅಧಿಕಾರ ಕಳೆದುಕೊಳ್ಳಲಿದ್ದು, ಮುಂದಿನ 15 ವರ್ಷ ರಾಹುಲ್ ಗಾಂಧಿ ಅವರಿಗೆ ಒಳ್ಳಯ ಕಾಲ ಬರಲಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್  ಹೇಳಿದ್ದಾರೆ. ಬಿಜೆಪಿ ಪಕ್ಷವು ನೂರು ಸುಳ್ಳುಗಳನ್ನು ಹೇಳಿ ಒಂದು ಸತ್ಯ ಮಾಡಲು ಹೊರಟಿದೆ, ಅವರ ಪತನದ ಕಾಲ ಸನಿಹವಾಗಿದೆ ಎಂದರು.

ಕೋಲಾರದಲ್ಲಿ  ಸುದ್ದಿಗಾರರ ಜೊತೆ ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್, ಜನರು ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ಒಳ್ಳೆಯ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ಬಿಜೆಪಿಯಂತೆ ಕೋಮುಭಾವನೆ ಹಾಗೂ ಜಾತಿ ಧರ್ಮಗಳ ಗಲಾಟೆಯ ಮೂಲಕ ರಾಜಕಾರಣ ಮಾಡಿಲ್ಲ. ಜನರ ಆಶೀರ್ವಾದವು ಕಾಂಗ್ರೆಸ್ ಪಕ್ಷಕ್ಕೆ ಇದ್ದು, ಕಾರ್ಯಕರ್ತರಿಗೂ ಒಳ್ಳೆಯ ಅವಕಾಶ ಸಿಗಲಿದೆ ಎಂದಿದ್ದಾರೆ.

ಮುಂದೆ ಸಹ ಕಾಂಗ್ರೆಸ್ ಪಕ್ಷದೊಂದಿಗೆ ಜನರ ವಿಶ್ವಾಸ ಇದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದೆ ಎಂದು ಹೇಳಿದರು.

 11:22:55