ಕ್ರೀಡೆಗಳು

ಆರ್‌ಸಿಬಿ ​ಅಭಿಮಾನಿಗಳಿಗೆ ಮೊಹಮ್ಮದ್‌ ಸಿರಾಜ್‌ ಭಾವುಕ ಪತ್ರ..!

ಸುದೀರ್ಘ 7 ವರ್ಷಗಳ ಆರ್‌ಸಿಬಿ ಜೊತೆಗಿನ ಸಿರಾಜ್‌ ಪಯಣ ಅಂತ್ಯವಾಗಿದೆ.. ಈ ಬೆನ್ನಲ್ಲೇ ಮೊಹಮ್ಮದ್‌ ಸಿರಾಜ್‌, ಆರ್‌ಸಿಬಿ ಮತ್ತು ಅಭಿಮಾನಿಗಳಿಗೆ ಸುದೀರ್ಘ ಪತ್ರ ಬರೆದಿದ್ದಾರೆ..

ಬೆಂಗಳೂರು: ಭಾರತ ತಂಡದಲ್ಲಿ ಮಾತ್ರವಲ್ಲ ಆರ್ಸಿಬಿಯಲ್ಲೂ ಮೊಹಮ್ಮದ್ಸಿರಾಜ್ರದ್ದು ಬೆಂಕಿ ಉಗುಳುವ ಬೌಲಿಂಗ್ಅಂದ್ರೆ ತಪ್ಪಲ್ಲ.. ರಣವೇಗದಲ್ಲಿ ಬರುವ ಸಿರಾಜ್ಅಂದ್ರೆ ಎಂಥಾ ಬ್ಯಾಟ್ಸ್ಮನ್ಗೆ ಎದೆ ಧಸಕ್ಎನ್ನದೇ ಇರೋದಿಲ್ಲ.. ಇಂತಾ ಬೌಲರ್ ಐಪಿಎಲ್ಆಕ್ಷನ್ನಲ್ಲಿ ಆರ್ಸಿಬಿ ಬಿಡ್ಮಾಡದೇ ಕೈಬಿಟ್ಟಿದೆ.. ಸುದೀರ್ಘ 7 ವರ್ಷಗಳ ಆರ್ಸಿಬಿ ಜೊತೆಗಿನ ಸಿರಾಜ್ಪಯಣ ಅಂತ್ಯವಾಗಿದೆ.. ಬೆನ್ನಲ್ಲೇ ಮೊಹಮ್ಮದ್ಸಿರಾಜ್‌, ಆರ್ಸಿಬಿ ಮತ್ತು ಅಭಿಮಾನಿಗಳಿಗೆ ಸುದೀರ್ಘ ಪತ್ರ ಬರೆದಿದ್ದಾರೆ..

ನನ್ನ ಪ್ರೀತಿಯ ಆರ್‌ಸಿಬಿ. ಆರ್‌ಸಿಬಿಯಲ್ಲಿದ್ದ 7 ವರ್ಷಗಳು ನನ್ನ ಹೃದಯಕ್ಕೆ ಹತ್ತಿರವಾದ ದಿನಗಳು. ನಾನು ಆರ್‌ಸಿಬಿ ಜರ್ಸಿ ತೊಟ್ಟಿದ್ದ ದಿನಗಳನ್ನು ಹಿಂದಿರುಗಿ ನೋಡಿದಾಗ ನನ್ನ ಹೃದಯ ಕೃತಜ್ಞತೆ, ಪ್ರೀತಿಯ ಭಾವನೆಯಿಂದ ತುಂಬಿದೆ. ನಾನು ಮೊದಲ ಬಾರಿಗೆ ಆರ್‌ಸಿಬಿ ಜರ್ಸಿ ತೊಟ್ಟ ದಿನ ಈ ತಂಡದೊಂದಿಗೆ ಇಷ್ಟು ಗಾಢ ಬಾಂಧವ್ಯ ಉಂಟಾಗುತ್ತೆ ಎಂದು ನಿರೀಕ್ಷಿಸಿರಲಿಲ್ಲ. ಆರ್‌ಸಿಬಿಗಾಗಿ ನಾನು ಬೌಲಿಂಗ್‌ ಮಾಡಿದ ಮೊದಲ ಬಾಲ್‌, ಪಡೆದ ಮೊದಲ ವಿಕೆಟ್‌, ಆಡಿದ ಪ್ರತಿಯೊಂದು ಪಂದ್ಯ, ನಿಮ್ಮೊಂದಿಗೆ ಕಳೆದ ಪ್ರತಿಯೊಂದು ಕ್ಷಣಗಳು ಅಭೂತಪೂರ್ವವಾದವು. ನನ್ನ ಈ ಪಯಣದಲ್ಲಿ ಹಲವು ಏರಿಳಿತಗಳಿದ್ದವು ಆದರೆ ಎಂತಹುದೇ ಸನ್ನಿವೇಶವಿದ್ದರೂ ನಿಮ್ಮ ಬೆಂಬಲ ಎಂದಿಗೂ ಕಡಿಮೆಯಾಗಲಿಲ್ಲ. ಆರ್‌ಸಿಬಿ ಕೇವಲ ಒಂದು ಫ್ರಾಂಚೈಸಿಯಲ್ಲ ಅದು ಒಂದು ಮಧುರವಾದ ಭಾವನೆ, ಹೃದಯದ ಬಡಿತ, ಅದು ನನ್ನ ಕುಟುಂಬವಿದ್ದಂತೆ. ನಾವು ಸೋಲನುಭವಿಸಿದ ಹಲವು ರಾತ್ರಿಗಳು ನನಗೆ ಅತೀವ ನೋವುಂಟು ಮಾಡಿದ್ದವು ಆದರೆ ಸ್ಟೇಡಿಯಂ ಸ್ಟ್ಯಾಂಡ್‌ ನಲ್ಲಿ ನಿಂತು ಬೆಂಬಲಿಸಿದ ನಿಮ್ಮ ಧ್ವನಿ ಮತ್ತು ಸೋಷಿಯಲ್‌ ಮೀಡಿಯಾದಲ್ಲಿನ ನಿಮ್ಮ ಸಂದೇಶ ನನ್ನನ್ನು ಇಷ್ಟು ದೂರ ತಂದು ನಿಲ್ಲಿಸಿದೆ. ಆರ್‌ಸಿಬಿಯ ಅಭಿಮಾನಿಗಳು ತಂಡದ ಆತ್ಮ. ನೀವು ನಮಗೆ ತುಂಬಿದ ಶಕ್ತಿ, ನೀವು ತೋರಿಸಿದ ಪ್ರೀತಿ ಮತ್ತು ನೀವು ನಮ್ಮಲ್ಲಿಟ್ಟ ನಂಬಿಕೆಗೆ ಯಾವುದೂ ಸಾಟಿಯಿಲ್ಲ. ಪ್ರತಿ ಬಾರಿ ನಾನು ಮೈದಾನಕ್ಕೆ ಇಳಿದಾಗ ನಿಮ್ಮ ಕನುಸುಗಳು, ಭರವಸೆಗಳ ಭಾರವನ್ನು ಹೊತ್ತು ಆಡಿದ್ದೇನೆ. ನೀವು ನನಗೆ ಸದಾ ಬೆಂಬಲ ಸೂಚಿಸಿದಿರಿ ಮತ್ತು ನನ್ನ ಆಟವನ್ನು ಉತ್ತಮಪಡಿಸಿಕೊಳ್ಳಲು ನೆರವಾಗಿದ್ದೀರಿ. ನಾವು ಸೋಲನುಭವಿಸಿದಾಗ ನಿಮ್ಮ ಕಣ್ಣೀರನ್ನೂ ನೋಡಿದ್ದೇವೆ. ನಾವು ಗೆಲುವು ಸಾಧಿಸಿದಾಗ ನಿಮ್ಮ ಸಂಭ್ರಮಾಚರಣೆಗೂ ಸಾಕ್ಷಿಯಾಗಿದ್ದೇನೆ. ನಿಮ್ಮಂತಹ ಅಭಿಮಾನಿಗಳು ವಿಶ್ವದಲ್ಲೇ ಬೇರೆಲ್ಲೂ ಇಲ್ಲ. ನಿಮ್ಮ ಪ್ರೀತಿ, ನಿಮ್ಮ ಸಮರ್ಪಣೆ ಮತ್ತು ನಿಮ್ಮ ನಿಷ್ಠೆ ನನಗೆ ಸಾಕಷ್ಟು ಪಾಠಗಳನ್ನು ಕಲಿಸಿದ್ದು, ನಾನು ನನ್ನ ಜೀವನದುದ್ದಕ್ಕೂ ಅದನ್ನು ಪಾಲಿಸುತ್ತೇನೆ. ಈಗ ನಾನು ನನ್ನ ವೃತ್ತಿ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದೇನೆ, ಆದರೆ ಆರ್‌ಸಿಬಿ ಸದಾ ನನ್ನ ಹೃದಯದಲ್ಲಿ ಇರುತ್ತದೆ. ಇದು ವಿದಾಯವಲ್ಲ ನನ್ನ ಧನ್ಯವಾದ. ನನ್ನಲ್ಲಿ ನಂಬಿಕೆಯಿಟ್ಟಿದ್ದಾಗಿ, ನನ್ನನ್ನು ಅಪ್ಪಿಕೊಂಡಿದ್ದಕ್ಕಾಗಿ ಮತ್ತು ನನ್ನನ್ನು ಕ್ರಿಕೆಟ್‌ಗಿಂತ ಹೊರತಾಗಿ ಭಾವಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ.”

ಎಂದು ತಮ್ಮ ಪತ್ರದಲ್ಲಿ ತಿಳಿಸಿದಾರೆ.

ಐಪಿಎಲ್‌ 2025 ಮೊಹಮ್ಮದ್‌ ಸಿರಾಜ್‌ ಗುಜರಾತ್‌ ಟೈಟನ್ಸ್‌ ಪರ ಕಣಕ್ಕಿಳಿಯಲಿದ್ದಾರೆ. ಮೆಗಾ ಹರಾಜಿನಲ್ಲಿ ಗುಜರಾತ್‌ ಟೈಟನ್ಸ್‌ ತಂಡ 12.25 ಕೋಟಿ ರೂ. ನೀಡಿ ಸಿರಾಜ್‌ರನ್ನ ಖರೀದಿಸಿದೆ.