ದೇಶ

ಹಿಂದಿ ಚಿತ್ರಕ್ಕೆ ಹೀರೋಯಿನ್‌ ಆದ್ಲಾ ವೈರಲ್‌ ಸುಂದರಿ ಮೋನಾಲಿಸ..!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಪಡ್ಡೆ ಹುಡುಗರ ನಿದ್ದೆ ಕದ್ದ ಚೆಲುವೆಯ ಬಗ್ಗೆ.. ಇದೇ ಚೆಲುವೆ ಕೆಲವೇ ದಿನಗಳಲ್ಲಿ ಬಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ತಾ ಇದ್ದಾಳೆ..

ವಿಶ್ವವಿಖ್ಯಾತ ಪ್ರಯಾಗ್ ರಾಜ್ ಮಹಾಕುಂಭ ಮೇಳದಲ್ಲಿ ಬೆಳಕಿಗೆ ಬಂದ ಕಪ್ಪು ಕಂಗಳ ಚೆಲುವೆ ಮೊನಾಲಿಸಾಳ ಅದೃಷ್ಟ ಖುಲಾಯಿಸಿದೆ.. ರಾತ್ರಿ ಕಳೆದು ಹಗಲಾಗೋದ್ರಲ್ಲಿ ಸ್ಟಾರ್ ಆಗಿದ್ದ ಹುಡುಗಿ ಈಗ ರಿಯಲ್ ಬಾಲಿವುಡ್ ಸ್ಟಾರ್ ಆಗುವ ಕಾಲ ಕೂಡಿ ಬಂದಿದೆ.. Yes… ನಾವ್ ಹೇಳ್ತಾ ಇರೋದು ಇದೇ ಮೊನಾಲಿಸಾ ಬಗ್ಗೆ.. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಪಡ್ಡೆ ಹುಡುಗರ ನಿದ್ದೆ ಕದ್ದ ಚೆಲುವೆಯ ಬಗ್ಗೆ.. ಇದೇ ಚೆಲುವೆ ಕೆಲವೇ ದಿನಗಳಲ್ಲಿ ಬಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ತಾ ಇದ್ದಾಳೆ.. 

ಹೂಮಾಲೆ ಮಾರುವ ಚೆಲುವೆ ಈ ಮೊನಾಲಿಸಾ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಾಲಿವುಡ್ನ ಖ್ಯಾತ ನಿರ್ದೇಶಕ ಸನೋಜ್ ಮಿಶ್ರಾ ಕಣ್ಣಿಗೂ ಬಿದ್ದಿದ್ದಾಳೆ.. ಈಗಾಗ್ಲೆ ‘ಡೈರಿ ಆಫ್ ಮಣಿಪುರ್’ ಚಿತ್ರದ ತಯಾರಿಯಲ್ಲಿರೋ ಸನೋಜ್ ಮಿಶ್ರಾ ತಮ್ಮ ಕಥೆಗೆ ಓರ್ವ ನಾಯಕಿಗಾಗಿ ಹುಡುಕಾಟ ನಡೆಸಿದ್ರು.. ಅದೇ ಸಮಯಕ್ಕೆ ಸೋಷಿಯಲ್ ಮಿಡಿಯಾದಲ್ಲಿ ಮೊನಾಲಿಸಾ ಕಾಣಿಸಿದ್ದಾಳೆ.. ತಡ ಮಾಡದ ನಿರ್ದೇಶಕ ಸನೋಜ್ ಮಿಶ್ರಾ ಅವರು, ಮೊನಾಲಿಸಾ ಮನೆ ತಲುಪಿದ್ದಾರೆ.. ಅವರ ಪೋಷಕರ ಜೊತೆಯಲ್ಲಿ ಮಾತುಕತೆ ನಡೆಸಿದ್ದಾರೆ.. ಮೊನಾಲಿಸಾ ಕೂಡ ಬಣ್ಣ ಹಚ್ಚೋಕೆ ಓಕೆ ಹೇಳಿದ್ದಾಳೆ.. 

‘ಡೈರಿ ಆಫ್ ಮಣಿಪುರ್’ ಒಂದು ರಿಯಲಿಸ್ಟಿಕ್ ಸಿನಿಮಾ.. ಮಣಿಪುರದಲ್ಲಿ ನಡೆದಂತಾ ಭೀಕರ ಘಟನೆಗಳನ್ನ ಆಧರಿಸಿದ ಚಿತ್ರ.. ಆ ಚಿತ್ರದ ಪ್ರಮುಖ ಪಾತ್ರದಲ್ಲಿ ಮೊನಾಲಿಸಾ ಕಾಣಿಸಿಕೊಳ್ತಾಳೆ.. ಅಂದ ಹಾಗೆ, ನಿರ್ದೇಶಕ ಸನೋಜ್ ಮಿಶ್ರಾ ಅವರ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಹೇಶ್ವರದಲ್ಲಿರುವ ಮೊನಾಲಿಸಾ ಮನೆಗೆ ಹೋಗಿ ಮುಂದಿನ ಚಿತ್ರಕ್ಕೆ ಸಹಿ ಪಡೆದಿದ್ದಾರೆ.. ಈ ವೇಳೆ ಮೊನಾಲಿಸಾ ಅವರು ಸಿನಿಮಾ ಮಾಡಲು ಒಪ್ಪಿದ್ದಷ್ಟೇ ಅಲ್ಲದೇ, ಪಾತ್ರಕ್ಕೆ ಜೀವ ತುಂಬಲು ತುಂಬ ಕಷ್ಟಪಡೋದಾಗಿಯೂ ತಿಳಿಸಿದ್ದಾಳೆ.. ನಿರ್ದೇಶಕರು ಹಾಗೂ ಮೊನಾಲಿಸಾ ಇಬ್ಬರೂ ಒಟ್ಟಿಗೆ ಇರುವ ಒಂದು ಫೋಟೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.. 

ಉಳಿದಿಂತೆ ನಿರ್ದೇಶಕ ಸನೋಜ್ ಮಿಶ್ರಾ ಅವರು ಮಾತನಾಡಿದ್ದು, ಮೊನಾಲಿಸಾ ಅವರ ಕುಟುಂಬವನ್ನ ಭೇಟಿಯಾದ ಬಗ್ಗೆ ಹೇಳಿಕೊಂಡಿದ್ದಾರೆ.. ಮೊನಾಲಿಸಾ ಅವರ ಕುಟುಂಬ ತುಂಬಾ ಮುಗ್ಧತೆಯಿಂದ ಕೂಡಿದೆ.. ಮೊನಾಲಿಸಾ ಅವರ ಭವಿಷ್ಯವನ್ನ ನಾನು ಚಿತ್ರರಂಗದಲ್ಲಿ ನೋಡಲು ಬಯಸಿದ್ದೇನೆ.. ಆಕೆ ಕಷ್ಟಪಟ್ಟು ಕೆಲಸ ಮಾಡಲು ಸಿದ್ಧಳಿದ್ದಾಳೆ.. ಆಕೆ ಇನ್ನೂ ಮಗುವಿನಂತಾ ಮನಸಿನವಳು, ಆಕೆಯನ್ನ ಓರ್ವ ನಟಿಯಾಗಿ ತಯಾರು ಮಾಡಬೇಕಿದೆ. ಆಕೆಯನ್ನ ತಯಾರು ಮಾಡಿ ಡೈರಿ ಆಪ್ ಮಣಿಪುರ್ ಚಿತ್ರದಲ್ಲಿ ಪ್ರಸ್ತುತ ಪಡಿಸುತ್ತೇನೆ ಎಂದಿದ್ದಾರೆ. 


ಇಂಟರೆಸ್ಟಿಂಗ್ ಏನಂದ್ರೆ, ಮೊನಾಲಿಸಾ ಯಾವ ಕ್ಯಾರೆಕ್ಟರ್ನಲ್ಲಿ ಕಾಣಿಸಿಕೊಳ್ತಾಳೆ ಅನ್ನೋ ಬಗ್ಗೆ ಸಣ್ಣ ಸುಳಿವನ್ನ ಕೂಡ ನೀಡಿಲ್ಲ.. ಆದ್ರೆ ಸೇನಾಧಿಕಾರಿಯೊಬ್ಬರ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುವ ಊಹಾಪೋಹಗಳಿವೆ.. ಒಟ್ಟು 20 ಕೋಟಿ ಬಜೆಟ್ನ ಡೈರಿ ಆಫ್ ಮಣಿಪುರ್ ಚಿತ್ರ ಫೆಬ್ರವರಿಯಲ್ಲಿ ಆರಂಭಗೊಂಡು ಅಕ್ಟೋಬರ್ನಲ್ಲಿ ತೆರೆ ಕಾಣಲಿದೆ.. ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಿಂದ ಮೊನಾಲಿಸಾ ಶೂಟಿಂಗ್ನಲ್ಲಿ ಪಾಲ್ಗೊಳ್ಳಲಿದ್ದಾಳೆ.. 

ನಿರ್ದೇಶಕ ಸನೋಜ್ ಮಿಶ್ರಾ ಬಾಲಿವುಡ್ನಲ್ಲಿ ಅನೇಕ ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ.. ರಾಮ ಜನ್ಮಭೂಮಿ, ದಿ ಡೈರಿ ಆಫ್ ವೆಸ್ಟ್ ಬೆಂಗಾಲ್ ಹಾಗೂ ಕಾಶಿ ಟು ಕಾಶ್ಮಿರ್ ಅವರ ಪ್ರಮುಖ ಚಿತ್ರಗಳಾಗಿವೆ.. ಮೊನಾಲಿಸಾ ಮೂಲತಃ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹುಡುಗಿ.. ಆಕೆಯ ಮುಗ್ಧ ನಗು ಹಾಗು ಆಕರ್ಷಕ ಕಣ್ಣುಗಳಿಂದ ಮಹಾಕುಂಭ ಮೇಳದ ಆಕರ್ಷಣೆಯಾಗಿಬಿಟ್ಟಳು.. ಯಾವುದೇ ಹೀರೋಯಿನ್ಗೂ ಸಿಗದಂತಾ ಐಡೆಂಟಿಟಿ ಆಕೆಗೆ ಸಿಕ್ಕಿಬಿಟ್ಟಿತು.. ಒಂದೇ ವಾರಕ್ಕೆ ಆಕೆ ಎಷ್ಟು ಫೇಮಸ್ ಆದಳು ಅಂದ್ರೆ, ಸೋಷಿಯಲ್ ಮೀಡಿಯಾ ತುಂಬೆಲ್ಲಾ ಮೊನಾಲಿಸಾಳದ್ದೇ ಸುದ್ದಿ.. ಅಷ್ಟೇ ಅಲ್ಲ, ಆಕೆಯ ಅಂದ ಚಂದ ಸೌಂದರ್ಯದ ಮೇಲೆ ಅನೇಕ ಭೋಜ್ಪುರಿ ಹಾಡುಗಳು ರಚನೆಯಾಗಿಬಿಟ್ಟವು.. ಅದೇನೆ ಇರಲಿ, ಸದ್ಯ ಮೊನಾಲಿಸಾ ಬಾಲಿವುಡ್ನಲ್ಲೂ ಮೋಡಿ ಮಾಡೋಕೆ ಹೊರಟಿದ್ದಾಳೆ.. ಆಲ್ ದಿ ಬೆಸ್ಟ್ ಹೇಳೋಣ…