ಚಿಕ್ಕಮಗಳೂರು : ಅರಣ್ಯಾಧಿಕಾರಿಯೊಬ್ಬರು ಆನ್‌ಲೈನ್ ಟಿಕೆಟ್ ನಕಲು ಮಾಡಿ ಪ್ರೇಯಸಿಯ ಖಾತೆಗೆ ಸರ್ಕಾರದ ಹಣವನ್ನು ಜಮಾ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ನಡೆದಿದೆ. ಪ್ರಿಯತಮೆಯ ಖಾತೆಗೆ ಸರ್ಕಾರದ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ಅರಣ್ಯಾಧಿಕಾರಿಯನ್ನ ಅಮಾನತು ಮಾಡಲಾಗಿದೆ.
ಫೋನ್ ಪೇ ಮೂಲಕ ಪ್ರಿಯತಮೆ ಖಾತೆಗೆ ಸರ್ಕಾರದ ಹಣವನ್ನು ವರ್ಗಾವಣೆ ಮಾಡಿದ ಆರೋಪದಲ್ಲಿ ಡಿ.ಆರ್.ಎಫ್.ಓ. ಚಂದನ್ ಗೌಡ ಅವರನ್ನು ಅಮಾನತು ಮಾಡಲಾಗಿದೆ. ಮೋನಿಕಾ ಎಂಬ ಯುವತಿಗೆ ಚಂದನ್ ಗೌಡ ಸರ್ಕಾರದ ಹಣವನ್ನು ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ರಾಣಿಝರಿ ಜಲಪಾತ, ಬಂಡಾಜೆ ಫಾಲ್ಸ್ ಬಳಿ ಟಿಕೆಟ್ ಗೋಲ್‌ಮಾಲ್ ಮಾಡಿ ಸರ್ಕಾರದ 9 ಸಾವಿರ ಹಣ ಮೋನಿಕಾ ಖಾತೆಗೆ ಜಮಾ ಮಾಡಲಾಗಿದೆ. ಚಂದನ್ ಗೌಡ ಸರ್ಕಾರಕ್ಕೆ ಮೋಸ ಮಾಡಿ 9 ಸಾವಿರ ಹಣವನ್ನ ವರ್ಗಾಯಿಸಿರುವುದು ಸಾಭೀತಾಗಿದ್ದು, ಇನ್ನೂ ಇಲಾಖೆಯ ಲಕ್ಷಾಂತರ ಹಣ ಯುವತಿಯ ಖಾತೆಗೆ ಜಮೆಯಾಗಿರುವ ಅನುಮಾನ ವ್ಯಕ್ತವಾಗುತ್ತಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಸರ್ಕಾರಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.