ಸಾಮಾಜಿಕ ಜಾಲತಾಣದಲ್ಲಿ ಶ್ರೀಮಂತ ಯುವತಿಯರನ್ನೇ ಟಾರ್ಗೆಟ್ ಮಾಡಿ ವಂಚನೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೇರಳದ ಟಾಮಿ ಫರ್ನಾಂಡಿಸ್ ಎಂಬುವರು ದೇಶಾದ್ಯಂತ ಯುವತಿಯರಿಗೆ ವಂಚನೆ ಮಾಡುತ್ತಿರುವುದು ಗೊತ್ತಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು, ಮದುವೆ ಮಾಡಿಕೊಳ್ಳುವ ಮೊದಲು ಸೆಟಲ್ ಆಗಬೇಕು. ಬಿಜಿನೆಸ್ ಮಾಡಲು ಹಣ ಬೇಕು. ಕೇರಳದಲ್ಲಿ ಮನೆ ಮಾರಾಟ ಮಾಡಿ ಹಣ ನೀಡುತ್ತೇನೆ ಎಂದು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಯುವತಿಯ ನಗ್ನ ವಿಡಿಯೋ ಮಾಡಿಕೊಂಡಿರುವ ಆರೋಪಿ, ಹಣ ಪಡೆದು ಕೇರಳಗೆ ಎಸ್ಕೇಪ್ ಆಗಿದ್ದಾನೆ. ಕೇರಳಗೆ ಹೋಗಿ ಹಣ ವಾಪಸ್ ಕೇಳಿದಾಗ, ನಗ್ನ ವಿಡಿಯೋ ತೋರಿಸಿ ಹಣ ನೀಡುವುದಿಲ್ಲ. ಹಣ ಕೇಳಿದರೆ ಖಾಸಗಿ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ. ಸದ್ಯ ಈ ಕುರಿತು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.