ವಿದೇಶ
ಗೂಗಲ್ ಗೆ 20 ಡೆಸಿಲಿಯನ್ ಡಾಲರ್ ದಂಡ..! ಯಾಕೆ ಗೊತ್ತಾ..?
ಗೂಗಲ್ ಕಂಪನಿ ರಷ್ಯಾದ ಸರ್ಕಾರಿ ಸ್ವಾಮ್ಯದ ಹಲವು ಚಾನಲ್ಗಳನ್ನು ಯೂಟ್ಯೂಬ್ ಮತ್ತು ಗೂಗಲ್ನ ಇತರೆ ಫ್ಲಾಟ್ಫಾರಂ ಗಳಲ್ಲಿ ಬ್ಯಾನ್ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಷ್ಯಾದ ಕೋರ್ಟ್ ಗೂಗಲ್ ಕಂಪನಿಗೆ 20 ಡೆಸಿಲಿಯನ್ ಡಾಲರ್ ($ 20,000,000,000,000,000,000,000,000,000,000,000) ದಂಡ ವಿಧಿಸಿ ಆದೇಶಿಸಿದೆ.
ಮಾಸ್ಕೋ: ರಷ್ಯಾದ ನ್ಯಾಯಾಲಯವೊಂದು ಅಪರೂಪದ ಪ್ರಕರಣವೊಂದರಲ್ಲಿ ಅಂತರ್ಜಾಲ ತಂತ್ರಜ್ಞಾನ ಕ್ಷೇತ್ರದ ಅಮೆರಿಕದ ದೈತ್ಯ ಕಂಪನಿ ಗೂಗಲ್ ಗೆ ಭಾರಿ ಮೊತ್ತದ ದಂಡ ವಿಧಿಸಿದೆ. ನ್ಯಾಯಾಲಯ ವಿಧಿಸಿರುವ ದಂಡದ ಪ್ರಮಾಣ ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಗೂಗಲ್ ಕಂಪನಿ ರಷ್ಯಾದ ಸರ್ಕಾರಿ ಸ್ವಾಮ್ಯದ ಹಲವು ಚಾನಲ್ಗಳನ್ನು ಯೂಟ್ಯೂಬ್ ಮತ್ತು ಗೂಗಲ್ನ ಇತರೆ ಫ್ಲಾಟ್ಫಾರಂ ಗಳಲ್ಲಿ ಬ್ಯಾನ್ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಷ್ಯಾದ ಕೋರ್ಟ್ ಗೂಗಲ್ ಕಂಪನಿಗೆ 20 ಡೆಸಿಲಿಯನ್ ಡಾಲರ್ ($ 20,000,000,000,000,000,000,000,000,000,000,000) ದಂಡ ವಿಧಿಸಿ ಆದೇಶಿಸಿದೆ.
ರಷ್ಯಾ 2022 ರಲ್ಲಿ ಉಕ್ರೇನ್ ವಿರುದ್ಧ ಯುದ್ಧ ಆರಂಭಿಸಿತ್ತು. ಉಕ್ರೇನ್ ಮೇಲೆ ದಾಳಿ ಮಾಡಿದ ರಷ್ಯಾ ವಿರುದ್ಧ ಜಾಗತಿಕ ಮಟ್ಟದಲ್ಲಿ ಟೀಕೆಗಳು ಕೇಳಿ ಬಂದಿದ್ದವು. ಈ ಸಂದರ್ಭದಲ್ಲಿ ಅಮೆರಿಕ, ಯುರೋಪಿಯ ರಾಷ್ಟ್ರಗಳು ಸೇರಿ ಹಲವು ರಾಷ್ಟ್ರಗಳು ರಷ್ಯಾ ವಿರುದ್ಧ ನಿರ್ಬಂಧ ಹೇರಿದ್ದವು. ಇದೇ ವೇಳೆಯಲ್ಲೇ ಗೂಗಲ್ ಸಹ ರಷ್ಯಾದ ಸರ್ಕಾರಿ ಸ್ವಾಮ್ಯದ ಮತ್ತು ಸರ್ಕಾರಿ ಬೆಂಬಲಿತ ಹಲವು ಟಿವಿ ಚಾನಲ್ ಗಳನ್ನು ತನ್ನ ಫ್ಲ್ಯಾಟ್ ಫಾರಂಗಳಲ್ಲಿ ಬ್ಯಾನ್ ಮಾಡಿತ್ತು.
Tsargrad TV, RT and Sputnik ಟಿವಿಗಳನ್ನು ಯೂಟ್ಯೂಬ್ ನಲ್ಲಿ ಬ್ಯಾನ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಕೋರ್ಟ್ 20 ಡೆಸಿಲಿಯನ್ ಡಾಲರ್ ದಂಡ ವಿಧಿಸಿದೆ. ಈ ಮೊತ್ತ ಜಗತ್ತಿನ ಎಲ್ಲಾ ರಾಷ್ಟ್ರಗಳ ಒಟ್ಟು ಜಿಡಿಪಿಗಿಂತ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ಕೋರ್ಟ್ ವಿಧಿಸಿರುವ ದಂಡದ ಮೊತ್ತದ ಕುರಿತು ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಕ್ರೆಮ್ಲಿನ್ನ ವಕ್ತಾರ ಡಿಮಿಟ್ರಿ ಪಿಸ್ಕೋವ್ ʼಕೋರ್ಟ್ ಸಾಂಕೇತಿಕವಾಗಿ ಈ ದಂಡವನ್ನು ವಿಧಿಸಿದೆ. ಗೂಗಲ್ ನಮ್ಮ ದೇಶದ ಟಿವಿ ಚಾನಲ್ಗಳ ವಿರುದ್ಧ ಕ್ರಮ ತೆಗೆದುಕೊಳ್ಳಬಾರದು. ಗೂಗಲ್ ಕಂಪನಿ ತನ್ನ ತಪ್ಪನ್ನು ತಿದ್ದಿಕೊಳ್ಳಲು ಗಮನ ಹರಿಸಬೇಕುʼ ಎಂದು ತಿಳಿಸಿದಾರೆ.