ವೈರಲ್

ತಾಯಿ ಮೇಲೆ ಪತ್ನಿ ಹಲ್ಲೆ; ವಿಡಿಯೋ ಮಾಡುತ್ತಾ ಕುಳಿತ ಪಾಪಿ ಮಗ..!

ಶಾಂತಮ್ಮ ಎಂಬ ವೃದ್ಧೆ ಮೇಲೆ ಸೊಸೆ ಸಂಜನಾ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾಳೆ. ಇದನ್ನ ಮಗ ರವೀಂದ್ರ ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಾ ಕುಳಿತು ಅಮಾನವೀಯವಾಗಿ ವರ್ತಿಸಿದ್ದಾನೆ.

ರಾಮನಗರ: ಅತ್ತೆಗೆ ಸೊಸೆ ಮನಬಂದತೆ ಥಳಿಸಿದ ಅಮಾನವೀಯ ಘಟನೆ ಚನ್ನಪಟ್ಟಣ ತಾಲೂಕಿನ ಅಬ್ಬೂರು ದೊಡ್ಡಿ ಗ್ರಾಮದಲ್ಲಿ ನಡೆದಿದೆ. ಹೆಂಡತಿ ತಾಯಿಯ ಮೇಲೆ ಹಲ್ಲೆ ನಡೆಸುತ್ತಿದ್ದರೆ, ಪಾಪಿ ಮಗ ಬಿಡಿಸುವುದನ್ನ ಬಿಟ್ಟು ವಿಡಿಯೋ ಮಾಡಿದ್ದಾನೆ. 

ಶಾಂತಮ್ಮ ಎಂಬ ವೃದ್ಧೆ ಮೇಲೆ ಸೊಸೆ ಸಂಜನಾ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾಳೆ. ಇದನ್ನ ಮಗ ರವೀಂದ್ರ ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಾ ಕುಳಿತು ಅಮಾನವೀಯವಾಗಿ ವರ್ತಿಸಿದ್ದಾನೆ. 

ಮನೆಬಿಟ್ಟು ಹೋಗುವಂತೆ ವೃದ್ಧೆ ಶಾಂತಮ್ಮ ಮೇಲೆ ಹಲ್ಲೆ ಮಾಡಿರೋ ಮಗ, ಸೊಸೆ ಹಲ್ಲೆ ಮಾಡಿರುವ ವಿಡಿಯೋವವನ್ನ ಸಂಬಂಧಿಕರಿಗೆ ಕಳುಹಿಸಿದ್ದಾರೆ. ಮಗ, ಸೊಸೆಯಿಂದ ವೃದ್ಧೆಗೆ ರಕ್ಷಣೆ ನೀಡುವಂತೆ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದು, ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.