ಮೈಸೂರು : ಸಿಎಂ ವಿರುದ್ಧ ಮುಡಾ ಕೇಸ್ ಗೆ ಸಂಬಂಧಪಟ್ಟಂತೆ, ಹಿಂದಿನ ಹೆಚ್ಚುವರಿ ಜಿಲ್ಲಾಧಿಕಾರಿ ಪಾಲಯ್ಯ ವಿಚಾರಣೆ ಮುಕ್ತಾಯಗೊಂಡಿದೆ. ಜಿಲ್ಲಾಧಿಕಾರಿ ಪಾಲಯ್ಯ ಅವರು ಮೈಸೂರಿನಲ್ಲಿ 2004ರಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದರು. ಮುಡಾದಲ್ಲೂ ಕರ್ತವ್ಯ ನಿರ್ವಹಿಸಿದ್ದರು. ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಅಧಿಕಾರಿಗಳು ಪಾಲಯ್ಯಗೆ ನೋಟೀಸ್ ನೀಡಿದ್ದರು. ಈ ಸಂಬಂಧ ಇಂದು ಮೈಸೂರು ಲೋಕಾಯುಕ್ತ ಕಚೇರಿಗೆ ಪಾಲಯ್ಯ ಅವರು ಹಾಜರಾಗಿದ್ದರು. ಇದೀಗ ವಿಚಾರಣೆ ಮುಗಿಸಿ ಪಾಲಯ್ಯ ಅವರು ಬೆಂಗಳೂರಿಗೆ ತೆರಳಿದ್ದಾರೆ.
/theprobe/media/post_attachments/wp-content/uploads/2022/04/37.-Karnataka-Lokayukta-O-1.webp)
ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದ ಪಾಲಯ್ಯ ಅವರು ಮಾತನಾಡಿ, ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ರು. ಅದಕ್ಕಾಗಿ ಬಂದಿದ್ದೆ. ಕಡತದಲ್ಲಿ ಸಹಿ ವಿಚಾರವಾಗಿ ಮಾಹಿತಿ ಕೇಳಿದ್ರು. ಅದಕ್ಕೆ ಸಂಬಂಧಿಸಿದ ಮಾಹಿತಿ ಕೊಟ್ಟಿದ್ದೇನೆ. ಅಧಿಕಾರಿಗಳು ಕೇಳಿದ ಎಲ್ಲಾ ಮಾಹಿತಿ ನೀಡಿದ್ದೇನೆ. ಮೊದಲ ಬಾರಿಯ ನೋಟಿಸ್ ನೀಡಿದ್ದಾಗ ಬೇರೊಂದು ಕೆಲಸದ ಕಾರಣ ಬಂದಿರಲಿಲ್ಲ. ಇಂದು ವಿಚಾರಣೆಗೆ ಹಾಜರಾಗುವಂತೆ ಎರಡನೇ ನೋಟಿಸ್ ನೀಡಿದ್ರು. ವಿಚಾರಣೆಗೆ ಹಾಜರಾಗಿದ್ದೇನೆ ಅಷ್ಟೇ ಎಂದು 2004ರಲ್ಲಿ ಮೈಸೂರಿನಲ್ಲಿ ಎಡಿಸಿ ಆಗಿದ್ದ ಪಾಲಯ್ಯ ಹೇಳಿದ್ದಾರೆ.