ಕರ್ನಾಟಕ

ಮುಡಾ ಕೇಸ್‌; ಸತ್ಯಕ್ಕೆ ಜಯ ಸಿಕ್ಕಿದೆ : ಯತೀಂದ್ರ ಸಿದ್ದರಾಮಯ್ಯ

ಮುಡಾ ಪ್ರಕರಣದಲ್ಲಿ ನನ್ನ ಹೆಸರನ್ನು ಕೂಡ ತಳುಕು ಹಾಕಲು ಯತ್ನ ನಡೀತು. ನಾನು ಮುಡಾ ಸದಸ್ಯ ಆಗಿದ್ದೆ. ಎಲ್ಲಿಯೂ ಕೂಡ ನಾನು ಏನು ಹೇಳಿಲ್ಲ. ಕೋರ್ಟ್ ನಲ್ಲೂ ಕೂಡ ನಮ್ಮ ಪರ ನ್ಯಾಯ ಸಿಗುತ್ತೆ ಎಂಬ ವಿಶ್ವಾಸ ಇದೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರು : ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಮುಡಾ ಹಗರಣದಲ್ಲಿ ಸಿಎಂ ಕುಟುಂಬಕ್ಕೆ ಲೋಕಾಯುಕ್ತ ಕ್ಲೀನ್ ಚಿಟ್‌ ನೀಡಿರುವ ವಿಚಾರಕ್ಕೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ , ಸೈಟ್ ವಿಚಾರವಾಗಿ ನನ್ನ ತಂದೆ ಯಾವುದೇ ಪತ್ರ ಬರೆದಿಲ್ಲ. ನನ್ನ ತಾಯಿ ಪತ್ರ ಬರೆದಿದ್ದರು. ನನ್ನ ಜಮೀನಿಗೆ ಬದಲಿ ನಿವೇಶನ ನೀಡಿ ಎಂದು ಬರೆದಿದ್ದರು. ಆದರೆ ಸೈಟ್ ಪಡೆಯುವಾಗ ಯಾವುದೇ ಪ್ರಭಾವ ಬಳಸಿಲ್ಲ. ಎಲ್ಲರಿಗೂ ಸೈಟ್ ಕೊಟ್ಟಂತೆ ನಮಗೂ ಕೊಟ್ಟಿದ್ದಾರೆ. ನಮ್ಮ ಜಮೀನು ಬಳಸಿಕೊಂಡು ಸೈಟ್ ಕೊಟ್ಟಿದ್ದಾರೆ.ಇದನ್ನೇ ದೊಡ್ಡ ಹಗರಣ ಅಂತ ಬಿಂಬಿಸಿದ್ರು. ಬೇಕು ಬೇಕು ಅಂತ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿದ್ರು ಎಂದು ವಿಪಕ್ಷ ನಾಯಕರುಗಳ ವಿರುದ್ಧ ಕಿಡಿಕಾರಿದ್ದಾರೆ.

ಮುಡಾ ಪ್ರಕರಣದಲ್ಲಿ ತಂದೆ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ ಚಿಟ್‌ ಸಿಕ್ಕಿದ್ದು, ಸತ್ಯಕ್ಕೆ ಜಯ ಸಿಕ್ಕಂತಾಗಿದೆ. ಪ್ರಕರಣದಲ್ಲಿ ನನ್ನ ಹೆಸರನ್ನು ಕೂಡ ತಳುಕು ಹಾಕಲು ಯತ್ನ ನಡೀತು. ನಾನು ಮುಡಾ ಸದಸ್ಯ ಆಗಿದ್ದೆ. ಎಲ್ಲಿಯೂ ಕೂಡ ನಾನು ಏನು ಹೇಳಿಲ್ಲ. ಕೋರ್ಟ್ ನಲ್ಲೂ ಕೂಡ ನಮ್ಮ ಪರ ನ್ಯಾಯ ಸಿಗುತ್ತೆ ಎಂಬ ವಿಶ್ವಾಸ ಇದೆ ಎಂದು ಮೈಸೂರಿನಲ್ಲಿ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.