ನನ್ನ ಅವಧಿಯಲ್ಲೇ ಸಿಎಂ ಪತ್ನಿ ಬದಲಿ ಭೂಮಿಯನ್ನು ಕೊಡಲು ತೀರ್ಮಾನಿಸಲಾಗಿತ್ತು. ಆದ್ರೆ ಅದಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಲಿಲ್ಲ ಎಂದು ಮುಡಾ ಮಾಜಿ ಅಧ್ಯಕ್ಷ ಧೃವಕುಮಾರ್ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸಿಎಂ ಪತ್ನಿಗೆ ಭೂಮಿ ಕೊಡುವ ಬಗ್ಗೆ ನನ್ನ ಅವಧಿಯಲ್ಲಿ ಈ ವಿಚಾರ ಸಭೆಯಲ್ಲಿ ಚರ್ಚೆಗೆ ಬಂತು. ಆಗ ಬದಲಿ ಜಾಗವನ್ನು ಕೊಡಲು ತೀರ್ಮಾನ ಕೂಡ ಮಾಡಿದ್ದೆವು. ಈ ವಿಚಾರವನ್ನ ನಾನೇ ಖುದ್ದಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಿಳಿಸಿದ್ದೆ. ಆದರೆ ಆಗ ಅವರು ಯಾವುದೇ ಕಾರಣಕ್ಕೂ ಬೇಡ ಎಂದು ಹೇಳಿದ್ರು ಎಂದಿದ್ದಾರೆ. ನನ್ನ ಅವಧಿ ಮುಗಿದ ಬಳಿಕ ಮುಂದೇನಾಗಿದೆ ಎಂಬುದು ನನಗೆ ಗೊತ್ತಿಲ್ಲ. ನಾನು ಮುಡಾ ಆಯುಕ್ತರಿಗೆ ಯಾವುದೇ ಪತ್ರ ಬರೆದಿಲ್ಲ.ನಮ್ಮ ಕಾಲದಲ್ಲಿ ಅಲ್ಲ ಹಿಂದಿನ ಕಾಲದಿಂದಲೂ 50:50 ಅನುಪಾತ ಜಾರಿಯಲ್ಲಿದೆ. ಆದರೆ ನನ್ನ ಅವಧಿಯಲ್ಲಿ 50:50 ಅನುಪಾತದಡಿಯಲ್ಲಿ 10 ಅಡಿ ಜಾಗವನ್ನು ಕೊಟ್ಟಿಲ್ಲ ಎಂದಿದ್ದಾರೆ.
ಅಲ್ಲದೇ ರೈತರನ್ನ ಕೇಳಿದಾಗ 50:50 ಅನುಪಾತಕ್ಕೆ ಯಾರೂ ಒಪ್ಪಲಿಲ್ಲ.ಹೀಗಾಗಿ ಹೊಸ ಬಡವಾಣೆ ನಿರ್ಮಾಣ ಮಾಡಿಲ್ಲ. ಸಿದ್ದರಾಮಯ್ಯ ಪತ್ನಿ ಯಾವ ಪತ್ರವನ್ನ ಬರೆದಿಲ್ಲ, ಫೋನ್ ಕೂಡ ನನಗೆ ಮಾಡಿಲ್ಲ ಎಂದಿದ್ದಲ್ಲದೇ, ಮಲ್ಲಿಕಾರ್ಜುನಸ್ವಾಮಿ ಸಹ ಬಂದು ನನ್ನ ಬಳಿ ಮನವಿ ಮಾಡಿಲ್ಲ. ಇ.ಡಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ಬಂದರೆ ಹೋಗಿ ತನಿಖೆ ಎದುರಿಸುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.