ಕರ್ನಾಟಕ
ಮುಡಾ ಹಿಂದಿನ ಆಯುಕ್ತರಿಗೆ ʼಲೋಕಾʼ ಗ್ರಿಲ್.. ಸಿಎಂಗೆ ಇನ್ನಷ್ಟು ಸಂಕಷ್ಟ?
ಹಿಂದಿನ ಮುಡಾ ಆಯುಕ್ತರಾಗಿದ್ದ ಕಾಂತರಾಜು ಇಂದು ಲೋಕಾಯುಕ್ತ ವಿಚಾರಣೆ ಎದುರಿಸಿದ್ದಾರೆ..
ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆ ಚುರುಕೊಂಡಿದೆ.. ಹಿಂದಿನ ಮುಡಾ ಆಯುಕ್ತರಾಗಿದ್ದ ಕಾಂತರಾಜು ಇಂದು ಲೋಕಾಯುಕ್ತ ವಿಚಾರಣೆ ಎದುರಿಸಿದ್ದಾರೆ.. ಕಾಂತರಾಜು ಆಯುಕ್ತರಾಗಿದ್ದ ಅವಧಿಯಲ್ಲಾದ ಮುಡಾ ಸೈಟ್ ಹಂಚಿಕೆ ಸಂಬಂಧ ಮಾಹಿತಿ ನೀಡಿದ್ದಾರೆ.. ವಿಚಾರಣೆ ಬಳಿಕ ಕಾಂತರಾಜು ಪ್ರತಿಕ್ರಿಯೆ ನೀಡಿದ್ದು, ನನ್ನ ಅವಧಿಯ ಮುಡಾ ವ್ಯವಹಾರಗಳ ಬಗ್ಗೆ ವಿಚಾರಣೆಗೆ ಕರೆದಿದ್ದರು ಎಂದಿದ್ದಾರೆ.. 2017ರಲ್ಲಿ ನಾನು ಮುಡಾ ಆಯುಕ್ತನಾಗಿದ್ದೆ, ಆಗ ಪಾರ್ವತಿಯವರು ಪಡೆದಿದ್ದ ಭೂಮಿ ಪರಿಹಾರದ ಬಗ್ಗೆ ಇಂದು ವಿಚಾರಣೆ ನಡೆದಿದೆ.. 2017ರ ಪ್ರಾಧಿಕಾರ ಸಭೆಯಲ್ಲಿ ಅಭಿವೃದ್ಧಿಪಡಿಸದ ಭೂಮಿ ಕೊಡಲು ತೀರ್ಮಾನ ಮಾಡಿದ್ದೆವು, ಇದೆಲ್ಲದರ ಬಗ್ಗೆ ವಿಚಾರಣೆ ಆಗಿದೆ ಎಂದಿದ್ದಾರೆ.. ಲೋಕಾಯುಕ್ತ ತನಿಖೆ ಪ್ರಗತಿಯಲ್ಲಿ ಇರುವುದರಿಂದ ಯಾವುದನ್ನ ಹೆಚ್ಚು ಹೇಳಲಾರೆ, ನನಗೂ ನಿರ್ಬಂಧಗಳಿವೆ ಎಂದಿದ್ದಾರೆ...