ಕರ್ನಾಟಕ

ಸಿಎಂ ಪತ್ನಿಗೆ ಮುಡಾ ತನಿಖೆ ಬಿಸಿ - ಸತತ 3 ಗಂಟೆಗಳ ವಿಚಾರಣೆ

ಸಿಎಂ ಪತ್ನಿ ಪಾವರ್ತಿ ಅವರು ಲೋಕಾಯುಕ್ತ ತನಿಖೆಗೆ ಹಾಜರು

ಮೈಸೂರು : ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸತತ 3 ಗಂಟೆಗಳ ತನಿಖೆಗೆ ಒಳಪಟ್ಟಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆ ಬಿಸಿಯನ್ನ ಸಿಎಂ ಪತ್ನಿ ಎದುರಿಸಬೇಕಾಯಿತು. ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ 2 ನೇ ಆರೋಪಿಯಾಗಿ ಪಾರ್ವತಿ ಸಿದ್ದರಾಮಯ್ಯ ಇದ್ದಾರೆ.

ಒಂದು ದಿನದ ಹಿಂದೆಯಷ್ಟೇ ಸಿಎಂ ಪತ್ನಿ ಪಾರ್ವತಿ ಅವರಿಗೆ ವಿಚಾರಣೆಗೆ ಹಾಜರು ಆಗುವಂತೆ ನೋಟಿಸ್ ನೀಡಲಾಗಿತು. ಸಿಎಂ ಪತ್ನಿ ಪಾರ್ವತಿ ಅವರನ್ನ ಲೋಕಾಯುಕ್ತ ಎಸ್ಪಿ ಉದೇಶ್ ವಿಚಾರಣೆಗೆ ಒಳಪಡಿಸಿದರು. ಸಾರ್ವಜನಿಕವಾಗಿ ಸಿಎಂ ಪತ್ನಿ ಉದ್ದೇಶಪೂರ್ವಕವಾಗಿ ಎದ್ದು ಕಾಣಿಸಿಕೊಂಡಿಲ್ಲ. ಇದೇ ರೀತಿ ಲೋಕಾಯುಕ್ತ ತನಿಖೆ ವೇಳೆಯಲ್ಲೂ ಗೌಪ್ಯವಾಗಿಯೇ ವಿಚಾರಣೆ ಎದುರಿಸಿದರು. ಇಡೀ ವಿಚಾರಣೆಯನ್ನ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಮುಡಾ ನಿವೇಶನ ಸಂಬಂಧ ಹತ್ತಾರು ಪ್ರಶ್ನೆಗಳನ್ನ ಮಾಡಿದ್ದಾರೆ ಎಂಬ ಮಾಹಿತಿ ಇದೆ.