ವೈರಲ್

ಮುಡಾ ಹಗರಣ ಸೈಟ್​ಗಳು ವಾಪಸ್ಸು ಕೊಡಿ - ಸಿಎಂ ಪತ್ನಿ ಸೈಟ್ ಎಫೆಕ್ಟ್

ಪಡೆದ ನಿವೇಶನಗಳನ್ನ ಹಿಂಪಡೆಯಲು ಚಿಂತೆನ

ಮೈಸೂರು - ಮೈಸೂರು ಅಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ಸಂಬಂಧ ಮಹತ್ವದ ನಿರ್ಧಾರ ಹೊರಬಿದ್ದಿದೆ. 2020 ರ ನಂತರ ಮುಡಾದಿಂದ ಹಂಚಿಕೆಯಾಗಿರುವ ಎಲ್ಲ 50/50 ಅಳತೆಯ ಸೈಟ್ಗಳನ್ನ ವಾಪಸ್ಸು ಪಡೆಯಲು ನಿರ್ಧರಿಸಿದೆ. ಮುಡಾದಿಂದ ನೀಡಿದ ಎಲ್ಲ ಬದಲಿ ನಿವೇಶನಗಳನ್ನ ಹಂಚಿಕೆಯನ್ನ ರದ್ದು ಮಾಡಲು ಪ್ರಾಧಿಕಾರ ಚಿಂತಿಸಿದೆ. ಮುಡಾ ನಿವೇಶನ ಹಂಚಿಕೆ ಸಂಬಂಧ ತನಿಖೆ ನಡೆಸಲು ನೇಮಕವಾಗಿರುವ ಆಯೋಗ ನೀಡುವ ವರದಿ ಆಧರಿಸಿ ಮತ್ತಷ್ಟು ನಿರ್ಧಾರ ಕೈಗೊಳ್ಳಲು ಮುಡಾ ಪ್ರಾಧಿಕಾರ ಸದಸ್ಯರ ಸಭೆಯಲ್ಲಿ ತೀರ್ಮಾನವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರಿಗೆ ಬದಲಿ ನಿವೇಶನ ಹೆಸರಲ್ಲಿ ಸೈಟ್  ಹಂಚಿಕೆ ವೇಳೆ ಅಕ್ರಮ ನಡೆದಿದೆ ಎಂದು ಆರೋಪಗಳು ಕೇಳಿ ಬಂದಿದೆ. ಸದ್ಯ ಪ್ರಕರಣ ಕೋರ್ಟ್ ಮೆಟ್ಟಿಲು ಸಹ ಹತ್ತಿದೆ. ಈ ನಿಟ್ಟಿನಲ್ಲಿ ಸಭೆ ನಡೆಸಿರುವ ಮುಡಾ ನಿವೇಶನ ಹಂಚಿಕೆಗಳ ವಿಚಾರವಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ.