ಕರ್ನಾಟಕ

ಇಂದಿನಿಂದ ಮೈಸೂರು ಅರಮನೆ ಶುಲ್ಕ ಹೆಚ್ಚಳ..ಪ್ರವಾಸಿಗರ ಜೇಬಿಗೆ ಕತ್ತರಿ..!

ಮೈಸೂರು ಅರಮನೆ ಪ್ರವೇಶಿಸುವ ವಯಸ್ಕರಿಗೆ 20 ರೂಪಾಯಿ ಹೆಚ್ಚಳ ಮಾಡಿದ್ದು, 120 ರೂ. ಪ್ರವೇಶ ಶುಲ್ಕ ನಿಗದಿಯಾಗಿದೆ.

ಇಂದಿನಿಂದ (ಅಕ್ಟೋಬರ್ 25) ಮೈಸೂರು ಅರಮನೆಗೆ ಪ್ರವೇಶ ದರ ಹೆಚ್ಚಳವಾಗಿದೆ. ಜಿಎಸ್ಟಿ ಸೇರಿ ಪ್ರವೇಶ ದರ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ವಿದೇಶಿ ಪ್ರವಾಸಿಗರಿಗೆ ಟಿಕೆಟ್ ದರ ಬರೋಬ್ಬರಿ 900 ರೂಪಾಯಿ ಹೆಚ್ಚಾಗಿದ್ದು, ಇನ್ನುಮುಂದೆ ವಿದೇಶಿ ಪ್ರವಾಸಿಗರಿಗೆ 1000 ರೂ. ನೀಡಿ ಅರಮನೆಯೊಳಗೆ ಪ್ರವೇಶಿಸಬೇಕಾಗುತ್ತದೆ.

ಭಾರತೀಯ ವಯಸ್ಕರಿಗೆ 20 ರೂಪಾಯಿ ಹೆಚ್ಚಳ ಮಾಡಿದ್ದು, 120 ರೂ. ಪ್ರವೇಶ ಶುಲ್ಕ ನಿಗದಿಯಾಗಿದೆ. 10 ರಿಂದ 18 ವರ್ಷದೊಳಗಿನ ಮಕ್ಕಳಿಗೆ 70 ರೂ. ಹಾಗೂ ಶೈಕ್ಷಣಿಕ ಪ್ರವಾಸ ಬರುವ ವಿದ್ಯಾರ್ಥಿಗಳಿಗೆ ತಲಾ 50 ರೂ. ನಿಗದಿ ಮಾಡಲಾಗಿದೆ. ಮೈಸೂರು ಅರಮನೆ ಮಂಡಳಿಯಿಂದ ಆದೇಶ ಹೊರಡಿಸಲಾಗಿದ್ದು ಒಳಾವರಣದಲ್ಲಿ ಚಪ್ಪಲಿ ಸ್ಟ್ಯಾಂಡ್, ಲಗ್ಗೇಜ್ ಕೊಠಡಿ, ಶೌಚಾಲಯ ಸೇವಾ ಶುಲ್ಕ ರದ್ದು ಮಾಡಿ, ಉಚಿತ ಸೇವೆ ನೀಡಲು ಅರಮನೆ ಮಂಡಳಿ ಮುಂದಾಗಿದೆ. ಈ ಮುಂಚೆ ಮೈಸೂರು ಅರಮನೆ ಪ್ರವೇಶ ಶುಲ್ಕ 100 ರೂ. ಮಾತ್ರ ಇತ್ತು.