ಕರ್ನಾಟಕ

ಮೈಶುಗರ್ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯ ಸ್ಥಗಿತ : ಅಧ್ಯಕ್ಷ ಸಿ.ಡಿ.ಗಂಗಾಧರ್‌ರಿಂದ ಮಾಹಿತಿ

ಮೈಶುಗರ್ ಕಾರ್ಖಾನೆಯಲ್ಲಿ ಕಬ್ಬು ನುರಿಯುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ತಿಳಿಸಿದರು. ಮೈಶುಗರ್‌ ಕಾರ್ಖಾನೆ ಈ ವರ್ಷ ಕಬ್ಬು ನುರಿಸುವ ಕಾರ್ಯ ನಿಲ್ಲಿಸಿದೆ.

ಮಂಡ್ಯ : ಮಂಡ್ಯ ಜಿಲ್ಲೆಯ ಮೈಶುಗರ್ ಕಾರ್ಖಾನೆಯಲ್ಲಿ ಕಬ್ಬು ನುರಿಯುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ತಿಳಿಸಿದರು. ಮೈಶುಗರ್‌ ಕಾರ್ಖಾನೆ ಈ ವರ್ಷ ಕಬ್ಬು ನುರಿಸುವ ಕಾರ್ಯ ನಿಲ್ಲಿಸಿದೆ. 

ಈ ಕುರಿತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಮೈ ಶುಗರ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌ ಅವರು, ಈ ವರ್ಷ ಯಶಸ್ವಿಯಾಗಿ ಕಬ್ಬು ನುರಿಯುವ ಕಾರ್ಯ ನಡೆದಿದೆ. ಕಳೆದ ಆಗಸ್ಟ್ 5ರಂದು ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ವಿದ್ಯುತ್ ಘಟಕದಲ್ಲಿ ಕಾರ್ಖಾನೆ ವಿದ್ಯುತ್ ಬಿಲ್ 10 ಕೋಟಿ ಉಳಿತಾಯವಾಗಿದೆ. 1,30,000 ಕ್ವಿಂಟಾಲ್ ಸಕ್ಕರೆ ಮಾರಾಟ ಮಾಡಿ 45 ಕೋಟಿ ಆದಾಯವಾಗಿದೆ.  ಪ್ರಸಕ್ತ ಸಾಲಿನಲ್ಲಿ ರೈತರಿಗೆ ಕಬ್ಬಿನ ಹಣ ಪಾವತಿ ಮಾಡಲಾಗಿದೆ. ಜಿಲ್ಲೆಯ ಇತರೆ ಕಾರ್ಖಾನೆಗಳಿಗೆ ಮೈಶುಗರ್ ‌ಮಾದರಿಯಾಗಿದೆ ಎಂದರು.

ಈಗಾಗಲೇ ಮೈಶುಗರ್‌ನಲ್ಲಿ 2.01 ಲಕ್ಷ ಟನ್‌ ಕಬ್ಬು ಕ್ರಷಿಂಗ್‌ ಮಾಡಲಾಗಿದೆ. ಕಬ್ಬು ಕಟಾವು ಮಾಡುವ ಕಾರ್ಯದಲ್ಲಿ ಗೊಂದಲಕ್ಕೀಡಾಗಿದ್ದ ಮೈಶುಗರ್ ಕಾರ್ಖಾನೆ, ಪ್ರಸ್ತುತ ಅವಧಿಯ ಕಬ್ಬು ನುರಿಯುವ ಕಾರ್ಯ ನಡೆಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.