ಮೈಸೂರಿನ ಚಾಮುಂಡಿ ಬೆಟ್ಟದ ಮಹಾ ನಂದಿಗೆ 19ನೇ ವರ್ಷದ ಮಹಾಭಿಷೇಕ ನೆರವೇರಿಸಲಾಗಿದೆ. ಕಾರ್ತಿಕ ಮಾಸದ ಪ್ರಯುಕ್ತ ಮೂರನೇ ಸೋಮವಾರದ ಹಿಂದಿನ ದಿನವಾದ ಇಂದು ( ಭಾನುವಾರ ), ಮಹಾಭಿಷೇಕ ಮಾಡಲಾಗಿದೆ. ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಭಿಷೇಕ ಹಾಗೂ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿದ್ದಾರೆ.
ಸುತ್ತೂರು ಶ್ರೀ ದೇಶೀಕೇಂದ್ರ ಮಹಾಸ್ವಾಮಿ, ಆದಿಚುಂಚನಗಿರಿ ಶಾಖ ಮಠದ ಸೋಮನಾಥನಂದ ಶ್ರೀಗಳು, ಹೊಸಮಠದ ಚಿದಾನಂದ ಶ್ರಿಗಳ ದಿವ್ಯ ಸಾನಿದ್ಯದಲ್ಲಿ ಮಹಾಭಿಷೇಕ ನೆರವೇರಿದೆ. ಲೋಕ ಕಲ್ಯಾಣ, ಸಕಲ ಒಳಿತಿಗಾಗಿ ತಾಯಿ ಚಾಮುಂಡೇಶ್ವರಿ, ಶ್ರಿ ನಂದಿಗೆ ಪೂಜೆ ಸಲ್ಲಿಸಿ, ಶಾಂತಿ ನೆಮ್ಮದಿ ಕರುಣಿಸಲೆಂದು ಪ್ರಾರ್ಥಿಸಲಾಗಿದೆ. ಪಂಚಾಮೃತ ಸ್ನಾನ, ಫಲಾಮೃತ, ರಸ ಪಂಚಾಮೃತ, ಪಿಷ್ಟ ಪಂಚಾಭಿಷೇಕ, ಗಂಧ ಪಂಚಾಭಿಷೇಕ, ಪಂಚಕಾಭಿಷೇಕ, ಸುಗಂಧ ದ್ರವ್ಯ ಅಭಿಷೇಕ ಸೇರಿದಂತೆ ಹತ್ತಾರು ಬಗೆಯ ಅಭಿಷೇಕ ಮಾಡಲಾಗಿದೆ.