ವೈರಲ್

ನಂಜನಗೂಡು ರೌಡಿಶೀಟರ್ ಧನರಾಜ್ ಬಂಧನ

ಅಧಿಕಾರ ಬಿಟ್ಟು ಕೊಡಲು ಹಿಂಜರಿಕೆ - ಪ್ರಕರಣ ಕೊಲೆ ಅನುಮಾನ

ಮೈಸೂರು :  ಅಧಿಕಾರದ ದಾಹ , ಅನುದಾನದ ಲೂಟಿಗೆ ಅಮಾಯಕ ವ್ಯಕ್ತಿಯ ಹತ್ಯೆ ಪ್ರಕರಣ ಸಂಬಂಧ ಮತ್ತೋರ್ವ ಆರೋಪಿ ಅರೆಸ್ಟ್ ಮಾಡಲಾಗಿದೆ.  ರೌಡಿ ಶೀಟರ್ ಧನರಾಜ್ ಭೋಲಾ ಬಂಧನವಾಗಿರುವ ವ್ಯಕ್ತಿ. ಈಗಾಗಲೇ ಬಿಜೆಪಿ ಮುಖಂಡ ಸೇರಿ ನಾಲ್ವರನ್ನ  ಪೊಲೀಸರು ಬಂದಿಸಿದರು. ಸದ್ಯ ಇದೀಗ ಮತ್ತೋರ್ವ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಬಂಧಿತರ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ. ನಂಜನಗೂಡಿನ ರೌಡಿಶೀಟರ್ ಧನರಾಜ್ ಭೋಲಾ ಬಂಧಿತ ಆರೋಪಿಯಾಗಿದೆ. ಈ ಹಿಂದೆ ಪಿಸ್ತೂಲ್ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದ ಧನರಾಜ್ ಭೋಲಾ ಮಾಹಿತಿಯೂ ಇದೆ.  ಜೈಲು ವಾಸ ಅನುಭವಿಸಿದ್ದ ಧನರಾಜ್ ಭೋಲಾ ಇದೀಗ ನಂಜುಂಡಸ್ವಾಮಿ ಕೊಲೆ ಪ್ರಕರಣದಲ್ಲಿ ಕೊಲೆ ಆರೋಪಿಯಾಗಿ ಅಂದರ್ ಆಗಿದ್ದಾರೆ. 

ನಂಜನಗೂಡು ತಾಲ್ಲೂಕಿನ ದೇವರಸನ ಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ಸುಮತಿ ಅವಧಿ ಮುಗಿದಿದ್ದು ಒಪ್ಪಂದದ ಪ್ರಕಾರ ಉಪಾಧ್ಯಕ್ಷೆಯಾಗಿದ್ದ ನಂಜುಂಡಸ್ವಾಮಿ ಪತ್ನಿ ಸೌಭಾಗ್ಯರಿಗೆ ಅಧ್ಯಕ್ಷೆ ಸ್ಥಾನದ ಅಧಿಕಾರ ನೀಡಬೇಕಿತ್ತು.ಆದರೆ ಈ ವಿಚಾರದಲ್ಲಿ ಸುಮತಿ ಸಂಬಂಧಿ ಹಾಗೂ ಹಾಲಿ ಸದಸ್ಯ ಗೋವರ್ಧನ್ ಅಡ್ಡಗಾಲು ಹಾಕಿ ಅಧಿಕಾರ ನೀಡಲು ಕ್ಯಾತೆ ತೆಗೆದಿದ್ದ. ಅಕ್ಟೋಬರ್ 6 ರಂದು ಇದೇ ವಿಚಾರವಾಗಿ ಮಾತನಾಡಲು ನಂಜುಂಡಸ್ವಾಮಿ ಹಣದ ಸಮೇತ ತೆರಳಿದ್ದಾರೆ. ಗೋವರ್ಧನ ಹಾಗೂ ಇತರರನ್ನ ಭೇಟಿ ಮಾಡಿದ್ದಾರೆ. ಆ ದಿನ ರಾತ್ರಿ ನಂಜುಂಡಸ್ವಾಮಿ ಮನೆಗೆ ಹಿಂದಿರುಗಿಲ್ಲ.ಮರುದಿನ ಜಮೀನೊಂದರಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಕಂಡುಬಂದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ವೇಳೆ ನಂಜುಂಡಸ್ವಾಮಿ ಮೃತಪಟ್ಟಿದ್ದಾರೆ.

ಸದ್ಯ ನಂಜುಂಡಸ್ವಾಮಿ ಸಾವು ಅನುಮಾನಾಸ್ಪದವಾಗಿದೆ ಎಂದು ಪತ್ನಿ ಸೌಭಾಗ್ಯ ಪೊಲೀಸ್ ಠಾಣೆಯಲ್ಲಿ ಗೋವರ್ಧನ್ ವಿರುದ್ದ ದೂರು ನೀಡಿ ಕೊಲೆ ಎಂದು ಆರೋಪಿಸಿದ್ದರು.

ಮತ್ತೊಂದೆಡೆ ಆರೋಪ ಹೊತ್ತ ಗೋವರ್ಧನ್ ಇದು ಅಪಘಾತ ಎಂದು ಬಿಂಬಿಸಿ ಪೊಲೀಸರನ್ನೇ ದಿಕ್ಕಿ ತಪ್ಪಿಸುವಂತೆ ಮಾಡಿದು , ಆದ್ರೆ ಸಂಚಾರಿ ಠಾಣೆ ಪೊಲೀಸರು ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ ಅನುಮಾನ ವ್ಯಕ್ತವಾಗಿತ್ತು. ಜೊತೆಗೆ ಉಪ್ಪಾರ ಜನಾಂಗದ ಮುಖಂಡರು ಕೊಲೆ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ನಂಜನಗೂಡು ಗ್ರಾಮಾಂತರ ಠಾಣೆಗೆ ಮುತ್ತಿಗೆ ಹಾಕಿದ್ದರು.ಪ್ರಕರಣ ದಾಖಲಿಸಿಕೊಂಡು ತೆನಿಖೆ ಆರಂಭಿಸಿದ ಪೊಲೀಸರಿಗೆ ಕೊಲೆ ಎಂದು ಖಚಿತವಾಗಿ ಗೋವರ್ಧನ್ ರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಸತ್ಯತೆ ಹೊರಬಿದ್ದಿತು.

ತಕ್ಷಣ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಜಾಹಿರ್, ಮಣಿಕಂಠ ಹಾಗೂ ಮಹೇಂದ್ರ ಸೇರಿ ನಾಲ್ವರನ್ನ ಬಂಧಿಸಿದ್ದರು. ಇದೀಗ 5 ನೇ ಆರೋಪಿ ಧನರಾಜ್ ಭೋಲಾನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಿಜೆಪಿ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಗೋವರ್ಧನ್ (36) ಸೇರಿ ಐವರ ಬಂಧನವಾಗಿದೆ.

ನಂಜನಗೂಡಿನ ನೀಲಕಂಠ ನಗರ ನಿವಾಸಿ ಜಾಹಿರ್ (25), ಹಳ್ಳದಕೇರಿ ನಿವಾಸಿ ಮಣಿಕಂಠ (24), ಕೆಎಚ್‌ಬಿ ಕಾಲೋನಿ ನಿವಾಸಿ ಮಹೇಂದ್ರ (25), ಧನರಾಜ್ ಭೋಲಾ ಬಂಧಿತ ಆರೋಪಿಗಳಾಗಿದ್ದಾರೆ.