ಸುಂದರವಾದ ಮಧ್ಯಮ ವರ್ಗದ ಕುಟುಂಬಗಳಿಗಾಗಿ ಟಾಟಾ ಕಂಪನಿಯವರು ನ್ಯಾನೋ ಕಾರುಗಳನ್ನ ಆವಿಷ್ಕರಿಸಿದ್ದರು. ಆದರೆ ಈ ಸರಳ ಸುಂದರ ಕಾರು ಕೆಲ ವರ್ಷಗಳಿಂದ ಸ್ಥಗಿತಗೊಂಡಿತ್ತು. ಹಲವು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಟಾಟಾ ನ್ಯಾನೋ ಮತ್ತೀಗ ಕಾರುಗಳ ಮಾರುಕಟ್ಟೆಯಲ್ಲಿ ತನ್ನ ದರ್ಬಾರ್ ನಡೆಸಲು ಬರುತ್ತಿದೆ.

ಹೌದು, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಎಲೆಕ್ಟ್ರಿಕ್ ವಾಹನವಾಗಿ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಡಲು ಟಾಟಾ ನ್ಯಾನೋ ಕಾರು ಸಜ್ಜಾಗುತ್ತಿದೆ. 200-400 ಕಿ.ಮೀ ಮೈಲೇಜ್ ನೀಡುವ ನಿರೀಕ್ಷೆಯಿರುವ ಈ ಕಾರುಗಳ ಬೆಲೆ, ಫೀಚರ್ ಹಾಗೂ ಬಿಡುಗಡೆ ದಿನಾಂಕ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಟಾಟಾ ನ್ಯಾನೋ EV
ಟಾಟಾ ಮೋಟಾರ್ಸ್ ವಿನೂತನವಾಗಿ ಹೊರತರಲಿರುವ ಟಾಟಾ ನ್ಯಾನೋ EV ಬಗ್ಗೆ ಹಲವು ದಿನಗಳಿಂದ ಒಂದಲ್ಲಾ ಒಂದು ಚರ್ಚೆಗಳು ನಡೀತಾನೆ ಇದ್ದವು. ಆದರೆ ಟಾಟಾ ನ್ಯಾನೋ EV ಯಾವಾಗ ಬಿಡುಗಡೆಯಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಸದ್ಯ ಕಾರುಗಳ ಮಾರುಕಟ್ಟೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹಾಗಾಗಿ ಪ್ರಸ್ತುತ ಬದಲಾವಣೆಗನುಗುಣವಾಗಿ ಟಾಟಾ ಕಂಪನಿಯ ನ್ಯಾನೋ ಎಲೆಕ್ಟ್ರಿಕ್ ಕಾರು ಹೊಸ ಅವತಾರದಲ್ಲಿ ಭಾರತೀಯ ಮಾರುಕಟ್ಟೆಗೆ ಕಾಲಿಡಲಿದೆ. ಈ ಕಾರುಗಳು ಹಲವು ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಸಿಂಗಲ್ ಚಾರ್ಜ್‌ನಲ್ಲಿ 200 ರಿಂದ 400 ಕಿಲೋಮೀಟರ್‌ಗಳಷ್ಟು ಪ್ರಯಾಣಿಸುತ್ತದೆ.

ಟಾಟಾ ನ್ಯಾನೋ EV ವೇಗವೆಷ್ಟು?
ಈ ಎಲೆಕ್ಟ್ರಿಕ್ ಫೋರ್-ವೀಲರ್ ಗರಿಷ್ಠ ವೇಗ ಗಂಟೆಗೆ 100 ಕಿಲೋಮೀಟರ್. ಆದರೆ ನ್ಯಾನೋ EVಯ ಬಗೆಗಿನ ಹೆಚ್ಚಿನ ಅಪ್ಡೇಟ್ಗಳು ಇನ್ನೂ ಲಭ್ಯವಾಗಿಲ್ಲ. ಆದರೆ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಟೀರಿಂಗ್ ಮೌಂಟ್ ಕಂಟ್ರೋಲ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮುಂತಾದ ಹಲವು ಸೌಲಭ್ಯಗಳಿರುತ್ತವೆ ಎಂದು ಹೇಳಲಾಗುತ್ತಿದೆ.

ಟಾಟಾ ನ್ಯಾನೋ EV ಬೆಲೆ ಎಷ್ಟು ಗೊತ್ತಾ?
ಟಾಟಾ ಮೋಟಾರ್ಸ್‌ನಿಂದ ಬಂದಿರುವ ಟಾಟಾ ನ್ಯಾನೋ EV ಬಜೆಟ್ ಫ್ರೆಂಡ್ಲಿಯಾಗಿದೆ. ಹೊಸ ಅವತರಣಿಕೆಯಲ್ಲಿ ಬರುಲು ಸಜ್ಜಾಗಿರುವ ಈ ಫೋರ್ ಲಿಲರ್ನಲ್ಲಿ ಹಲವು ಹೊಸ, ಆಧುನಿಕ ವೈಶಿಷ್ಟ್ಯಗಳನ್ನು ನೋಡಬಹುದು. ಹಲವು ಸೌಲಭ್ಯಗಳಿರುವ ಈ ಕಾರಿನ ಬೆಲೆ ₹ 6 ಲಕ್ಷದಿಂದ ₹ 8 ಲಕ್ಷದವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.