ದಶಕಗಳ ಕನಸು ನೆರವೇರಿದೆ. ಕೊಟ್ಟ ಮಾತಿನಂತೆ ನಡೆದುಕೊಂಡು ನಮ್ಮ ಸರ್ಕಾರ, ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆ ಮಾಡಿದೆ ಎಂದು, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿಕೆ ನೀಡಿದ್ದಾರೆ. ಮಂಡ್ಯದ ಟಿ.ಕೆ.ಹಳ್ಳಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ಮುಂದಿನ ಹತ್ತು ವರ್ಷ ಕುಡಿಯುವ ನೀರಿಗೆ ಸಮಸ್ಯೆ ಆಗಲ್ಲ. ಇದರಿಂದ ಮಳವಳ್ಳಿಗೆ ಲಾಭವಿಲ್ಲ, ಆದರೇ ನಮಗೆ ಈ ಯೋಜನೆ ಹೆಮ್ಮೆ. ಕಾವೇರಿಯೊಂದಿಗೆ ಸಪ್ತನದಿಗಳನ್ನ ಜೋಡಿಸಿ ಬೆಂಗಳೂರಿಗೆ ನೀರು ಕೊಡ್ತಿದೆ. ಅಂತಹ ಸೌಭಾಗ್ಯ ಮಳವಳ್ಳಿಗೆ ಸೇರಿದೆ ಎಂದು ಹೇಳಿದ್ದಾರೆ.
ಜಲಮಂಡಳಿ ಮಳವಳ್ಳಿಯ ಪ್ರಾಥಮಿಕ ಶಿಕ್ಷಣಕ್ಕಾಗಿ ಕ್ಲಷ್ಟರ್ ಗೊಂದು ಮಲ್ಟಿ ಮೀಡಿಯಾ ನೀಡಲಿ. ಜಲಮಂಡಳಿಯಲ್ಲಿ ಟೆಕ್ನಿಕಲ್ ಹಾಗೂ ಗ್ರೂಪ್ ಡಿ ಹುದ್ದೆಯಲ್ಲಿ ಮಳವಳ್ಳಿ ಜನರಿಗೆ ಸಿಂಹಪಾಲು ಸಿಗಬೇಕು ಎಂದಿದ್ದಾರೆ. ಅಲ್ಲದೇ ಮಳವಳ್ಳಿಯಲ್ಲಿ ಹೊಸ ಅಂಬೇಡ್ಕರ್ ಭವನ ನಿರ್ಮಾಣ ಮಾಡುವಂತೆ ಸಿಎಂ, ಡಿಸಿಎಂ ಮುಂದೆ ಮೂರು ಬೇಡಿಕೆಯನ್ನು ಕೂಡ ಇಟ್ಟಿದ್ದಾರೆ.