ಕರ್ನಾಟಕ

ಮುಡಾ ಸೈಟ್ ವಿಚಾರದಲ್ಲಿ ನಟೇಶ್ ಸುಳ್ಳು ಹೇಳಿದ್ದಾರೆ; RTI ಕಾರ್ಯಕರ್ತ ಗಂಗರಾಜು..!

ಸಿಎಂ ಸಿದ್ದರಾಮಯ್ಯ ಪತ್ನಿಗೆ ಭೂಮಿ ದಾನವಾಗಿ ಬಂದಿದ್ದು ಎಂಬ ವಿಚಾರದಲ್ಲಿ, ಮುಡಾ ಮಾಜಿ ಆಯುಕ್ತ ಸರ್ಕಾರಕ್ಕೆ ಸುಳ್ಳು ಹೇಳಿದ್ದಾರೆ ಎಂದು ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಆರೋಪ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಪತ್ನಿಗೆ ಭೂಮಿ ದಾನವಾಗಿ ಬಂದಿದ್ದು ಎಂಬ ವಿಚಾರದಲ್ಲಿ, ಮುಡಾ ಮಾಜಿ ಆಯುಕ್ತ ಸರ್ಕಾರಕ್ಕೆ ಸುಳ್ಳು ಹೇಳಿದ್ದಾರೆ ಎಂದು ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ  ಮಾತನಾಡಿದ ಅವರು, ಮುಡಾದ ದಾಖಲೆಗಳಲ್ಲೇ ಗೊಂದಲಗಳು ಬಹಿರಂಗಗೊಂಡಿದೆ. ಈವರೆಗೆ ಸಿಎಂ ಬಾಮೈದ ತಮ್ಮ ತಂಗಿಗೆ ಅರಿಶಿನ ಕುಂಕುಮಕ್ಕೆ ದಾನವಾಗಿ ನೀಡಿದ್ದು ಎಂದು ಹೇಳಲಾಗಿತ್ತು.ಆದರೆ ಮಾಜಿ ಆಯುಕ್ತ ನಟೇಶ್ ಬರೆದಿರುವ ಪತ್ರದಲ್ಲಿ ಮಾರಾಟ ಎಂದು ಉಲ್ಲೇಖ ಮಾಡಿದ್ದಾರೆ. ಮಲ್ಲಿಕಾರ್ಜುನಸ್ವಾಮಿಯಿಂದ ಪಾರ್ವತಿಗೆ ಮಾರಾಟವಾಗಿದೆ ಎಂದು ಉಲ್ಲೇಖವಾಗಿದೆ ಎಂದಿದ್ದಾರೆ.

ಭೂಮಿಯನ್ನು ಪ್ರಾಧಿಕಾರ ವಶಪಡಿಸಿಕೊಂಡ ಕಾರಣದಿಂದ, ಅಷ್ಟೇ ವಿಸ್ತೀರ್ಣದ ಜಮೀನನ್ನು ಪ್ರಾಧಿಕಾರದ ಸಮಾನಾಂತರ ಬಡಾವಣೆಯಲ್ಲಿ ನೀಡುವಂತೆ ಕೋರಿದ್ರು. ಇದಕ್ಕೆ ಪೂರಕವಾಗಿ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ15.12.2017 ಮತ್ತು 30.12.2017 ಸಭೆಯ ನಿರ್ಣನ ಕೂಡ ಉಲ್ಲೇಖ ಮಾಡಿದ್ದಾರೆ. ಸರ್ಕಾರದ ನಿರ್ದೇಶನ ಬರುವ ಮುನ್ನವೇ ನಿವೇಶನ ನೀಡಿ ಅಕ್ರಮ ಮಾಡಿದ್ದಾರೆ. ನಟೇಶ್ ಒಬ್ಬ ದೊಡ್ಡ ಭ್ರಷ್ಟ ಎಂದು ಆಕ್ರೋಶ ಹೊರ ಹಾಕಿದ್ದಾರೆ.