ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರ ಪತನದ ನಂತರ, 'ಅಮರ್ ಸೋನಾರ್ ಬಾಂಗ್ಲಾ ' ರಾಷ್ಟ್ರಗೀತೆಯನ್ನು ತೀವ್ರಗಾಮಿಗಳು ಬದಲಾಯಿಸಲು ಒತ್ತಾಯಿಸುತ್ತಿದ್ದಾರೆ. ಬಾಂಗ್ಲಾದೇಶದ ಜಮಾತ್-ಎ ಇಸ್ಲಾಮಿಯ ಮಾಜಿ ಅಧ್ಯಕ್ಷ ಎಮಿರ್ ಗುಲಾಮ್ ಅಜಮ್ ಅವರ ಪುತ್ರ ಅಬ್ದುಲ್ಲಾಹಿಲ್ ಅಮನ್ ಅಜ್ಮಿ ದೇಶದ ರಾಷ್ಟ್ರ ಗೀತೆ ಮತ್ತು ಸಂವಿಧಾನದಲ್ಲಿ ಬದಲಾವಣೆ ಆಗಬೇಕೆಂದು ಕರೆ ನೀಡಿದ್ದಾರೆ.
ಈ ವಾರದ ಆರಂಭದಲ್ಲಿ "ರಾಷ್ಟ್ರ ಗೀತೆಯ ವಿಷಯವನ್ನು ನಾನು ಈ ಸರ್ಕಾರಕ್ಕೆ ಬಿಡುತ್ತೇ ನೆ" ಎಂದು ಅಜ್ಮಿ ಹೇಳಿದ್ದರು. ಪ್ರಸ್ತುತ ರಾಷ್ಟ್ರಗೀತೆ ನಮ್ಮ ಸ್ವತಂತ್ರ ಬಾಂಗ್ಲಾದೇಶದ ಅಸ್ತಿತ್ವ ಕ್ಕೆ ವಿರುದ್ಧವಾಗಿದೆ. ಇದು ಬಂಗಾಳದ ವಿಭಜನೆ ಮತ್ತು ಎರಡು ಬಂಗಾಳಗಳ ವಿಲೀನದ ಸಮಯದಲ್ಲಿ ಬ್ರಿಟಿಷರ ಕಾಲದಲ್ಲಿ ರಚಿಸಿದ್ದು.
ಎರಡು ಬಂಗಾಳಗಳನ್ನು ಒಂದುಗೂಡಿಸಲು ರಚಿಸಿದ ರಾಷ್ಟ್ರಗೀತೆ ಹೇಗೆ ಸ್ವತಂತ್ರ ಬಾಂಗ್ಲಾದೇಶದ ರಾಷ್ಟ್ರ ಗೀತೆಯಾಗಲು ಸಾಧ್ಯ ? ಈ ರಾಷ್ಟ್ರಗೀತೆಯನ್ನು 1971ರಲ್ಲಿ ಭಾರತವು ನಮ್ಮ ಮೇಲೆ ಹೇರಿತು. ಅನೇಕ ಹಾಡುಗಳು ರಾಷ್ಟ್ರ ಗೀತೆಯಾಗಿ ಕಾರ್ಯನಿರ್ವಹಿಸಬಹುದು. ಹೊಸ ರಾಷ್ಟ್ರಗೀತೆಯನ್ನು ಆಯ್ಕೆ ಮಾಡಲು ಸರ್ಕಾರ ಹೊಸ ಆಯೋಗವನ್ನು ರಚಿಸಬೇಕು ಎಂದು ಆಗ್ರಹಿಸಿದ್ದಾರೆ.