ಕರ್ನಾಟಕ

ಉಡುಪಿ ಜಿಲ್ಲಾಡಳಿತದ ಮುಂದೆ ನಕ್ಸಲ್ ಲಕ್ಷ್ಮೀ ತೊಂಬಟ್ಟು ಶರಣಾಗತಿ

ಕಳೆದ ಕೆಲವು ದಿನಗಳ ಹಿಂದೆ 6 ನಕ್ಸಲರು ಬೆಂಗಳೂರಿನ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಎದುರು ಶರಣಾಗಿದ್ದರು.. ಹಲವು ದಿನಗಳಿಂದ ಭೂಗತನಾಗಿದ್ದ ರವಿ ಕೋಟೆ ಹೊಂಡ ನಿನ್ನೆ ಚಿಕ್ಕಮಗಳೂರಿನಲ್ಲಿ ಶರಣಾಗಿದ್ದ...

ನಕ್ಸಲ್ ಚಟುವಟಿಕೆಯಲ್ಲಿ ಕಳೆದ 20 ವರ್ಷಗಳ ಹಿಂದೆ ತೊಡಗಿಸಿಕೊಂಡಿದ್ದ ಕುಂದಾಪುರ ತಾಲೂಕಿನ ತೊಂಬಟ್ಟುವಿನ ಲಕ್ಷ್ಮೀ ಇಂದು ಉಡುಪಿ ಜಲ್ಲಾಡಳಿತದ ಮುಂದೆ ಶರಣಾಗಿದ್ದಾರೆ.. ಈ ಮೂಲಕ ಉಡುಪಿ ಜಿಲ್ಲೆಯ ಪ್ರಥಮ ನಕ್ಸಲ್ ಹೋರಾಟಗಾರ್ತಿ ಸಮಾಜದ ಮುಖ್ಯ ವಾಹಿನಿಗೆ ಆಗಮಿಸಿದ್ದಾರೆ..
ಕಳೆದ ಕೆಲವು ದಿನಗಳ ಹಿಂದೆ 6 ನಕ್ಸಲರು ಬೆಂಗಳೂರಿನ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಎದುರು ಶರಣಾಗಿದ್ದರು.. ಹಲವು ದಿನಗಳಿಂದ ಭೂಗತನಾಗಿದ್ದ ರವಿ ಕೋಟೆ ಹೊಂಡ ನಿನ್ನೆ ಚಿಕ್ಕಮಗಳೂರಿನಲ್ಲಿ ಶರಣಾಗಿದ್ದ. ಇದೀಗ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮವಾಸ್ಯೆ ಬೈಲಿನ ತೊಂಬಟ್ಟು ಗ್ರಾಮದ ಲಕ್ಷ್ಮೀ,, ಉಡುಪಿ ಜಿಲ್ಲಾಡಳಿತ ಎದುರು ಶರಣಾಗಲಿದ್ದಾಳೆ.. ಕರ್ನಾಟಕದಿಂದ ನಾಪತ್ತೆಯಾಗಿದ್ದ ಲಕ್ಷ್ಮೀ ತೊಂಬಟ್ಟು,, ಆಂಧ್ರಪ್ರದೇಶದಲ್ಲಿ ನಕ್ಸಲರಾಗಿ ಸಕ್ರೀಯರಾಗಿದ್ದಳು.. ನಂತರ ಮಾಜಿ ನಕ್ಸಲ್‌ ಆಗಿದ್ದ ಸಂಜೀವ್ ಎಂಬಾತನನ್ನು ವಿವಾಹವಾಗಿ ಬಳಿಕ ನಕ್ಸಲ್ ತೊರೆದು, ಆಂಧ್ರದಲ್ಲಿ ಸಂಸಾರಿಕ ಜೀವನ ನಡೆಸುತ್ತಿದ್ದರು..