ಹೊಸ ವರ್ಷ ಬರ್ತಾ ಇದೆ. ಈ ಹಳೇ ಪೋನ್ ಸಾಕಾಯ್ತಾಪ್ಪ. 2025 ಬರೋದ್ರೊಳಗೆ ಒಳ್ಳೆ ಆಫರ್ ನೋಡಿ ಒಂದು ಬೆಸ್ಟ್ ಫೋನ್ ತಗೊಬೇಕು ಅಂತಾ ಕಾದಿರುವವರಿಗೆ ಒಂದು ಗುಡ್ ನ್ಯೂಸ್ ಇದೆ. ಒಂದೊಳ್ಳೆ ಸ್ಮಾರ್ಟ್ ಫೋನ್ ಬೇಕು. ಬೆಲೆ ಕೈಗೆಟುಕುವಂತಿರಬೇಕು. ಕ್ಯಾಮರಾ ಕ್ವಾಲಿಟಿ ಮಸ್ತ್ ಆಗಿರಬೇಕು. ಬ್ಯಾಟರಿ, ಮೆಮೊರಿ ಎಲ್ಲವೂ ಹೈಕ್ಲಾಸ್ ಆಗಿರಬೇಕು ಅಂತಾ ಲೇಟೆಸ್ಟ್ ಫೋನ್‌ಗಳ ಹುಡುಕಾಟದಲ್ಲಿರುವ ನಿಮಗಾಗಿ ಒನ್‌ಪ್ಲಸ್ ನವರು ಭರ್ಜರಿ ಆಫರ್ ನೀಡ್ತಿದ್ದಾರೆ.
ಹೌದು..! ಹಾಗಾದ್ರೆ ಆ ಫೋನ್ ಬೆಲೆ ಎಷ್ಟು? ಸೇಲ್ ಯಾವಾಗ? ಏನೆಲ್ಲಾ ಆಫರ್ ಗಳಿವೆ.. ಅಂತಾ ಕನ್‌ಫ್ಯೂಸ್ ಆಗೋದು ಬೇಡ. ಯಾಕಂದ್ರೆ ಲೇಟೆಸ್ಟ್ ಒನ್ ಪ್ಲಸ್ ಫೋನ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಸ್ಮಾರ್ಟ್ ಫೋನ್ ಪ್ರಿಯರಿಗೆ ಒನ್ ಪ್ಲಸ್ ಅಂದ್ರೆ ಅದೇನೋ ಪ್ರೀತಿ. ಹೌದು, ಜನರ ಪ್ರೀತಿಯನ್ನ ಜೀವಂತವಾಗಿಟ್ಟುಕೊಳ್ಳಲು ಸದಾ ಬಯಸುವ ಒನ್ ಪ್ಲಸ್, ಬಿಗ್ ಆಫರ್ ಜೊತೆ ಜನರ ಗಮನವನ್ನ ಸೆಳೆದಿದೆ. ಯಸ್, ಕಮ್ಯೂನಿಟಿ ಸೇಲ್ ಆರಂಭಿಸಿರುವ ಒನ್ ಪ್ಲಸ್ ( OnePlus ) ದೊಡ್ಡ ಮಟ್ಟದ ಡಿಸ್ಕೌಂಟ್ ಘೋಷಿಸಿದೆ.
ಎಲ್ಲಿದೆ ಆಫರ್ ?
ಶುಕ್ರವಾರ ಅಂದರೆ ನಾಳೆಯಿಂದಲೇ ಒನ್‌ಪ್ಲಸ್ ಕಮ್ಯೂನಿಟಿ ಸೇಲ್ ಶುರುವಾಗ್ತಿದೆ. ಅಮೆಜಾನ್, ಫ್ಲಿಪ್‌ಕಾರ್ಟ್, ಮಿಂತ್ರಾ, ಒನ್‌ಪ್ಲಸ್ ಆಫ್‌ಲೈನ್ ಸ್ಟೋರ್‌ಗಳು, ರಿಲಯನ್ಸ್ ಬಜಾಜ್ ಎಲೆಕ್ಟ್ರಾನಿಕ್ಸ್ ಹಾಗೂ ಅಷ್ಟೇ ಅಲ್ಲಾ ರೀಟೇಲ್ ಸ್ಟೋರ್‌ಗಳಲ್ಲಿಯೂ ಕೂಡಾ ಒನ್ ಪ್ಲಸ್ ಭರ್ಜರಿ ಆಫರ್ ಹೊತ್ತಿ ತರುತ್ತಿದೆ.
ಆಫರ್ ಪಡೆಯುವ ಮಾರ್ಗ ಹೇಗೆ?
ಅಯ್ಯೋ ಆಫರ್ ಏನೋ ಇದೆ, ಆದ್ರೆ ಅದನ್ನ ಹೇಗಪ್ಪಾ ತೆಗೆದುಕೊಳ್ಳೋದು ಅಂತಾ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಯಾಕೆಂದರೆ, ಈ ಬಿಗ್ ಸೇಲ್‌ನಲ್ಲಿ ಬ್ಯಾಂಕ್ ಸೌಲಭ್ಯಗಳು ಕೂಡ ನಿಮಗಾಗಿ ಕಾದಿದೆ. ICICI ಬ್ಯಾಂಕ್, OneCard ಹಾಗೂ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಗ್ರಾಹಕರು ಡಿಸ್ಕೌಂಟ್ ಗಳನ್ನ ಪಡೆಯಬಹುದು.
OnePlus 12 ಫೋನ್ ಗಳನ್ನ ಆಕರ್ಷಕ ಆಫರ್‌ಗಳಲ್ಲಿ ಖರೀದಿಸಬಹುದು. ಬ್ಯಾಂಕ್ ರಿಯಾಯಿತಿ ಬೆಲೆಯಲ್ಲಿ 69,999ರೂ. ಬೆಲೆಯ ಫೋನ್ ನನ್ನ ನೀವು 7000 ಇನ್‌ಸ್ಟಂಟ್ ಆಫರ್ ನೊಂದಿಗೆ ಕೇವಲ 55,999ರೂ. ಗಳಿಗೆ ಕೊಂಡುಕೊಳ್ಳಬಹುದು. ಹಾಗೆಯೇ, ಒನ್‌ಪ್ಲಸ್ 12R ಮೊಬೈಲ್ ಫೋನನ್ನ 6,000 ಇನ್‌ಸ್ಟೆಂಟ್ ರಿಯಾಯಿತಿ ಹಾಗೂ 3,000ರೂ ಬ್ಯಾಂಕ್ ಆಫರ್ ಲಭ್ಯವಿದ್ದು, 39,999ರೂ ಬೆಲೆಯ ಫೋನ್ ಅನ್ನ ಕೇವಲ 30 ಸಾವಿರಕ್ಕೆ ಫಟಾ ಫಟ್ ಅಂತಾ ಖರೀದಿಸಬಹುದು.
ಹಾಗಾದರೆ ಟ್ರೈ ವೇಸ್ಟ್ ಮಾಡದೇ ನಾಳೆ ಒನ್‌ಪ್ಲಸ್ ಕಮ್ಯೂನಿಟಿ ಸೇಲ್ (OnePlus Community sale)ಗೆ ಭೇಟಿ ನೀಡಿ. ಆದಷ್ಟು ಬೇಗ ಹೊಸ ವರ್ಷ ಬರುವುದರೊಳಗೆ ಹೊಸ ಫೋನ್ ಖರೀದಿಸಿ.