ಬೆಳಗಾವಿ : ರಾಮದುರ್ಗದ ಬಟಕುರ್ಕಿಗೆ ಬಸನಗೌಡ ಪಾಟೀಲ್ ಯತ್ನಾಳ ಭೇಟಿ ನೀಡಿದ್ದು, ವಿಶ್ವ ಹಿಂದೂ ಪರಿಷದ್ ನ ಹಿಂದೂ ಮಹಾಗಣಪತಿ ವಿಸರ್ಜನ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ. ಹಿಂದೂ ಮಹಾಗಣಪತಿ ವಿಸರ್ಜನ ಮಹೋತ್ಸವ ತಡರಾತ್ರಿ ನಡೆದಿದ್ದು, ವಿಸರ್ಜನ ಮಹೋತ್ಸವದಲ್ಲಿ ಬಸನಗೌಡ ಯತ್ನಾಳ ಭಾಷಣ ಮಾಡಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ದೇಶದಲ್ಲಿ ಮುಸ್ಲಿಂಮರು 14 ರಿಂದ 15 ಪರ್ಸಂಟ್ ಇದ್ದಾರೆ. ಇಷ್ಟು ಕನಿಷ್ಠ ಸಂಖ್ಯೆಯಲ್ಲಿದ್ರೂ ಅವರು ಜಿಗಿದಾಡ್ತಾರೆ, ಕಲ್ಲು ಹೊಡಿತಾರೆ. ಅವರು 30ರಿಂದ 40 ಪರ್ಸಂಟ್ ಜಾಸ್ತಿಯಾದರೆ ಸಿದ್ದರಾಮಯ್ಯ ಸಿಎಂ ಆಗೊಲ್ಲ. ಈಗ ಜಿಗಿದಾಡ್ತಿರೋ ಯಡಿಯೂರಪ್ಪನ ಮಗ ವಿಜಯೇಂದ್ರಾನೂ ಸಿಎಂ ಆಗೊಲ್ಲ. ಜಮೀರ ಅಹ್ಮದ್ ಸಿಎಂ ಆಗ್ತಾನೆ. ಅವನ ಮನೆಯಲ್ಲಿ ಸಿದ್ದರಾಮಯ್ಯ ಚಾ ಕೊಡೊಕೆ ಇರ್ತಾನೆ ಎಂದು ಯತ್ನಾಳ್ ವ್ಯಂಗ್ಯವಾಗಿ ಮಾತನಾಡಿದ್ದಾರೆ.
ಮುಂದಿನ ಜನ್ಮ ಇದ್ದರೆ ಮುಸ್ಲಿಂನಾಗಿ ಹುಟ್ಟುವೆ ಎಂದ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಯತ್ನಾಳ್, ಅದೇ ಹೇಳಿಕೆಯನ್ನಿಟ್ಟುಕೊಂಡು ಸಿಎಂಗೆ ಯತ್ನಾಳ ಟಾಂಗ್ ಕೊಟ್ಟಿದ್ದಾರೆ. ಮುಂದಿನ ಜನ್ಮ ಬೇಡ ಈಗಲೇ ಆಗಿಬಿಡು ಎಂದಿದ್ದಾರೆ. ಹಾಲುಮತ ಸಮಾಜದಲ್ಲಿ ಹುಟ್ಟಿ ಈ ರೀತಿ ಮಾತನಾಡುತ್ತಾರೆ. ಮುಂದಿನ ಜನ್ಮದಲ್ಲಿ ಹಿಂದೂ ಧರ್ಮದ ಒಬ್ಬ ದಲಿತನಾಗಿ ಹುಟ್ತಿನಿ ಅಂತ ಇವರ ಬಾಯಲ್ಲಿ ಬರಲ್ಲ. ನಮ್ಮ ದೇಶದ ಹಿತಕ್ಕಾಗಿ ಚಿಂತನೆ ಮಾಡಿದವರು ಬಾಬಾಸಾಹೇಬ್ ಅಂಬೇಡ್ಕರ್ ಅವರು. ಎಲ್ಲಿಯವರೆಗೆ ದೇಶದಲ್ಲಿ ಮುಸ್ಲಿಂಮರು ಇರ್ತಾರೋ ಅಲ್ಲಿವರೆಗೆ ಕಲ್ಲು ಬೀಳ್ತವೆ ಬಾಂಬ್ ಹಾರ್ತವೆ ಅಂತ ಬಾಬಾಸಾಹೇಬರು ಹೇಳಿದ್ದಾರೆ. ಪಾರ್ಟೇಷನ್ ಆಫ್ ಪಾಕಿಸ್ತಾನ್ ಎಂಬ ಪುಸ್ತಕದಲ್ಲಿ ಅವರು ಎಲ್ಲವನ್ನೂ ಹೇಳಿದ್ದಾರೆ.
ಭಾರತ ಪಾಕಿಸ್ತಾನ ಒಡೆದು ಕೊಡೆವುದಾದರೆ, ಇಲ್ಲಿನ ಮುಸ್ಲಿಂಮರು ಪಾಕಿಸ್ತಾನಕ್ಕೆ ಹೋಗಲಿ. ಅಲ್ಲಿನ ಹಿಂದುಗಳು ಇಲ್ಲಿಗೆ ಬರಲಿ ಎಂದು ಬಾಬಾಸಾಹೇಬರು ಹೇಳಿದ್ದರು. ಅಂಬೇಡ್ಕರ ಭಾರತ ಒಡೆಯಬೇಡಿ ಎಂದು ಹೇಳಿದ್ದರು. ಪಾಕಿಸ್ತಾನದಲ್ಲಿ ಲಕ್ಷಾಂತರ ಹಿಂದೂಗಳ ಕಗ್ಗೊಲೆ ಆಯ್ತು. ರಕ್ತದ ಹೊಳೆಯೇ ಹರಿಯಿತು ನಂತರ ಅಲ್ಲಿನ ಹಿಂದೂಗಳು ನಮ್ಮ ಕಡೆ ಬಂದರು. ಗಣೇಶ ಹಬ್ಬದ ದಿನ ಡಿಜೆ ಹಚ್ಚಬೇಡಿ ಎಂದರು.
ಬೊಮ್ಮಾಯಿ ಸರ್ಕಾರ ಇದ್ದಾಗ ಒಂದೇ ದಿನ ಗಣೇಶ ಕೂರಿಸಿ ಎಂದು ಪೊಲೀಸರು ಕಂಡಿಷನ್ ಮಾಡಿದ್ದರು. ಆಗ ನಾನು ಬೊಮ್ಮಾಯಿಗೆ ಹೇಳಿದೆ, ನಾನು ವಿಜಯಪುರದಲ್ಲಿ 11 ದಿನ ಗಣೇಶ ಕೂರಿಸ್ತಿನಿ. ಪರ್ಮಿಷನ್ ಸಲುವಾಗಿ ಪೊಲೀಸ್ ಠಾಣೆಗೆ ಹೋಗಲ್ಲ ನೀನೆನ್ ಮಾಡ್ಕೊತಿಯೋ ಮಾಡ್ಕೊ ಎಂದಿದ್ದೆ ಅಂತ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿ, ಐಜಿಪಿ ಅವರು ಸುಮ್ಮನೆ ಸರ್ಕ್ಯೂಲರ್ ಮಾಡಿದ್ದೆವೆ ಎಷ್ಟು ದಿನ ಕೂರಿಸ್ತಿರೋ ಕೂರಿಸಿ ಎಂದರು. ಕಾಂಗ್ರೇಸ್ ಸರ್ಕಾರ ಇದ್ದರೂ ಸಹ ಡಿಜೆಗೆ ಈಗ ಪೊಲೀಸರು ಅಭ್ಯಂತರ ಮಾಡೋದಿಲ್ಲ. ಕೆಜೆಹಳ್ಳಿ, ಡಿಜೆಹಳ್ಳಿ ಕೇಸ್ ಆದಾಗಲೂ ಏನೂ ಮಾಡಲಿಲ್ಲ. ಅರಗ ಜ್ಞಾನೇಂದ್ರಗೇ ನಾನು ಹೇಳಿದೆ ನೀನು ಬಿಟ್ಟು ಬಿಡು ಅಂದೆ. ಅವರು ಬಿಜೆಪಿಗೆ ವೋಟ್ ಹಾಕಿಲ್ಲ ಅಂದೆ. ಬಿಜೆಪಿಗೆ ವೋಟ್ ಹಾಕಿದವರು ಹಿಂದೂಗಳು.
ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಲ್ಲ. ಹಿಂದೂಕೆ ಸಾಥ್ ಹಿಂದೂಕೆ ವಿಕಾಸ್ ದೇಶ ದ್ರೋಹಿಂಕೋ ಲಾಕ್ ಎಂದು ಯತ್ನಾಳ ಹೇಳಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಅವರು, ನಮ್ ಪೊಲೀಸರಿಗೆ ಫ್ರೀ ಬಿಡಿ ಅವರು ಎಲ್ಲರನ್ನೂ ಕಂಟ್ರೋಲ್ ಮಾಡ್ತಾರೆ. ನೀವು ಎಷ್ಟು ಕೇಸ್ ಹಾಕ್ತಿರೋ ಹಾಕಿ ಮತ್ತೆ ನಮ್ ಸರ್ಕಾರ ಬರುತ್ತೆ. ನಿಮ್ಮ ಆಶೀರ್ವಾದ ನೋಡಿದ್ರೆ ಮುಂದಿನ ಬಿಜೆಪಿ ಮುಖ್ಯಮಂತ್ರಿ ನಾನೇ ಆಗ್ತಿನಿ. ವೋಟ್ ಹಾಕೋರೆ ನನ್ನ ಕಡೆ ಇದ್ದರೆ ಬಾಕಿ ಉಳಿದೋರು ಎನ್ ಮಾಡ್ತಾರೆ. ನಾನು ಸಿಎಂ ಆದರೆ ಹೊಸ ಯುಗ ಪ್ರಾರಂಭ ಆಗುತ್ತೆ. ಹಿಂದೂ ಯುಗ ಪ್ರಾರಂಭ ಆಗುತ್ತದೆ. ಎಲ್ಲಾ ಹಿಂದೂ ಸಮಾಜದ ಜನರಿಗೆ ನ್ಯಾಯ ಕೊಡಬೇಕು. ಹಿಂದುತ್ವದ ಬಗ್ಗೆ ಮಾತಾಡೋರೆ ಕಡಿಮೆ ಇದ್ದಾರೆ. ನಾನು ಸಿಟಿರವಿ ಪ್ರಮೋದ ಮುತಾಲಿಕ ರಷ್ಟೆ ಮಾತಾಡ್ತಿವಿ. ನಾವು ರಾತ್ರಿ ಸಿದ್ದರಾಮಯ್ಯ, ಡಿಕೆಶಿ ಜಮೀರ್ ಅಹಮ್ಮದ ಮನೆಗೆ ಹೋಗಲ್ಲ ಎಂದಿದ್ದಾರೆ.
ನಮಗೆ ನಿಮ್ಮ ವೋಟು ಬೇಡ ನಮಗೆ ಹಿಂದೂ ವೋಟುಗಳು ಮಾತ್ರ ಸಾಕು. ಸಾರ್ವಜನಿಕ ಗಣಪತಿಗಳು ಹಿಂದೂ ಮಹಾಗಣಪತಿಗಳಾಗಿ ಪರಿವರ್ತನೆ ಆಗಿದ್ದಾವೆ. ಇಡೀ ಸಮಾಜ ಒಂದಾದರೆ ಸಮಾಜ ಸುಭಿಕ್ಷ ಆಗುತ್ತದೆ. ಹಿಂದುತ್ವ ಉಳಿಸಲು ಎಲ್ಲಾ ಯುವಕರು ಗಟ್ಟಿಯಾಗಿ ನಿಲ್ಲಿ. ಲಿಂಗಾಯತರು ಹಿಂದೂಗಳಲ್ಲ ಎಂದ ಸ್ವಾಮೀಜಿಗಳು ಸಾಬರಾಗಬೇಕು ಎಂದು ಕರೆ ನೀಡಿದ್ದಾರೆ.