ಕ್ರೀಡೆಗಳು

ಐಸಿಸಿ ಚಾಂಪಿಯನ್ಸ್‌ ಟ್ರೋಪಿಗೆ ಹೊಸ ಉಪನಾಯಕ..? ಪಾಂಡ್ಯಗಿಲ್ಲ ಚಾನ್ಸ್‌?

ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿಯೂ ಬುಮ್ರಾ ನಾಯಕನಾಗಿ ಸಮರ್ಥವಾಗಿ ತಂಡ ನಿಭಾಯಿಸಿದ್ದರು. ಹೀಗಾಗಿಯೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಬುಮ್ರಾನಗೆ ಉಪನಾಯಕನ ಪಟ್ಟ ಕಟ್ಟಲು ಚರ್ಚೆ ನಡೆಯುತ್ತಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ-2025ಗಾಗಿ ಭಾರತ ತಂಡದ ಅಧಿಕೃತ ಘೋಷಣೆಗೆ ಕೆಲವೇ ದಿನಗಳು ಬಾಕಿಯಿದ್ದರೂ, ಸಮರ್ಥ ತಂಡದ ಆಯ್ಕೆಗೆ ಕಸರತ್ತು ಜೋರಾಗಿದೆ. ರೋಹಿತ್‌ ಶರ್ಮಾ ನಾಯಕನಾಗಿ ತಂಡವನ್ನ ಮುನ್ನಡೆಸಲಿದ್ದಾರೆ. ಆದ್ರೆ ಉಪನಾಯಕನಿಗೆ ಸಂಬಂಧಿಸಿದಂತೆ ಹೊಸಬರಿಗೆ ಮಣೆ ಹಾಕಲು ಆಯ್ಕೆ ಸಮಿತಿ ಮುಂದಾಗಿದೆ ಎನ್ನಲಾಗ್ತಿದೆ. ಶುಬ್‌ಮನ್‌ ಗಿಲ್ ಅಥವಾ ಹಾರ್ದಿಕ್ ಪಾಂಡ್ಯಗೆ ಉಪನಾಯಕನ ಪಟ್ಟ ಕಟ್ಟುವ ಬದಲು ಜಸ್ಪ್ರೀತ್ ಬುಮ್ರಾಗೆ ಈ ಜವಾಬ್ದಾರಿ ನೀಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗ್ತಿದೆ. 2024ರಲ್ಲಿ ಟೀಂ ಇಂಡಿಯಾ ಕೇವಲ 3 ಏಕದಿನ ಪಂದ್ಯವನ್ನ ಮಾತ್ರ ಆಡಿದೆ. ಏಕದಿನ ಪಂದ್ಯದಲ್ಲಿ ಭಾರತ ತಂಡದಲ್ಲಿ ಹೆಚ್ಚು ಬದಲಾವಣೆ ಅಥವಾ ಯಾವುದೇ ಪ್ರಯೋಗ ಮಾಡಿಲ್ಲ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿಯೂ ಬುಮ್ರಾ ನಾಯಕನಾಗಿ ಸಮರ್ಥವಾಗಿ ತಂಡ ನಿಭಾಯಿಸಿದ್ದರು. ಹೀಗಾಗಿಯೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಬುಮ್ರಾನಗೆ ಉಪನಾಯಕನ ಪಟ್ಟ ಕಟ್ಟಲು ಚರ್ಚೆ ನಡೆಯುತ್ತಿದೆ.