ರಾಮನಗರ : ನಿಖಿಲ್ ಕುಮಾರಸ್ವಾಮಿ ಹಾಗೂ ದೇವೇಗೌಡರನ್ನ ಪ್ರತಿ ಬೂತ್ ನಲ್ಲಿ ಗೆಲ್ಲಿಸ್ತೇವೆ ಲೀಡ್ ಕೊಡ್ತೇವೆ ಅಂತೇಳಿ ಬೂತ್ ನಲ್ಲಿ ಗೆಲ್ಲಿಸಿ ಎಂದು MLC ರವಿಕುಮಾರ್ ಹೇಳಿದ್ದಾರೆ. ಬೂತ್ ನಲ್ಲಿ ನಾಯಕತ್ವ ತಗೋಬೇಕು. ದೇವೇಗೌಡ ಕಳೆದ ಒಂದು ವಾರದಿಂದ ನಿಖಿಲ್ ಕುಮಾರಸ್ವಾಮಿ ಗೆಲ್ಲಿಸಬೇಕು ಅಂತ ಓಡಾಡ್ತಾ ಇದಾರೆ. ನಿಖಿಲ್ ಗೆದ್ರೆ ನರೇಂದ್ರ ಮೋದಿಗೆ ಗೌರವ ಕೊಟ್ಟಂಗೆ. ಎಲ್ಲಾ ಸಮಾಜದ ಜನರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ. ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಬೂತ್ ಬೇಗ ಎದ್ದು ನಾನು ಗಂಗಾಮತಸ್ತ ಸಮಾಜಕ್ಕೆ ಸೇರಿದವನು ಬೆಸ್ತ ಎಸ್ ಸಿ ಎಸ್ ಟಿ ಸಮಾಜದವರಿಗೆ ಮನವಿ ಮಾಡ್ತೇನೆ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕಾಡುಗೊಲ್ಲ ಜನಾಂಗದವರನ್ನು ಎಸ್ ಟಿ ಸಮುದಾಯಕ್ಕೆ ಸೇರಸಲು ದೇವೇಗೌಡರು ಪ್ರಯತ್ನಸುತ್ತಿದ್ದಾರೆ. ಬೆಸ್ತ, ಸಮಾಜ ಗಂಗಾಮತ್ತ ಸಮಾಜದವ್ರನ್ನ ಎಸ್ ಟಿ ಸೇರಿಸ್ತೇವೆ. ಬೆಸ್ತ ಸಮಾಜದ ಎಲ್ಲಾ ಮತಗಳನ್ನು ಜೆಡಿಎಸ್ ನಿಖಿಲ್ ಕುಮಾರಸ್ವಾಮಿಗೆ ಹಾಕಬೇಕು. ದೇವೇಗೌಡರು ಎಲ್ಲಾ ಸಮುದಾಯವನ್ನ ಮೇಲೆತ್ತಿದವ್ರು. ಒಕ್ಕಲಿಗ ಸಮಾಜದವ್ರು ಮನಸ್ಸು ಮಾಡಿದ್ರೆ ಎಲ್ಲಾ ಸಮುದಾಯದವರನ್ನ ಕರೆದು ಕೊಂಡು ಬಂದು ಮತ ಹಾಕಿಸಬೇಕು. ಎಲ್ಲರಿಗೂ ದೀರ್ಘ ದಂಡ ನಮಸ್ಕಾರ ಮಾಡಿ ಮನವಿ ಮಾಡ್ತೇನೆ ಎಂದರು.
ಇದೆ ವೇಳೆ ಮಾತನಾಡಿದ ಅವರು, ಎರಡು ಬಾರಿ ನಿಖಿಲ್ ಕುಮಾರಸ್ವಾಮಿ ಪೆಟ್ಟು ತಿಂದಿದ್ದಾರೆ. ಹಗಲು ದರೋಡೆ ಕಾಂಗ್ರೆಸ್ ಸರ್ಕಾರ ವಿರುದ್ಧ ಸ್ಪರ್ಧೆಗೆ ಎದೆಗಾರಿಕೆ ಬೇಕು. ಆ ಎದೆಗಾರಿಕೆ ಇರೋ ನಾಯಕ ಅಂದ್ರೆ ನಿಖಿಲ್ ಕುಮಾರಸ್ವಾಮಿ. ಗೆಲ್ತಾರೆ ಅಂತ ದೇವೆಗೌಡರು, ಮೋದಿ ಅವ್ರು ಕುಮಾರಸ್ವಾಮಿ ನಿಲ್ಲಿಸಿದ್ದಾರೆ. ಯೋಗೇಶ್ವರ್ ಜಂಪಿಗ್ ಸ್ಟಾರ್. ಒಳ ಒಪ್ಪಂದವನ್ನು ಮುರಿತೇವೆ. ಒಳ ಒಪ್ಪಂದದ ವಿರುದ್ಧ ಚುನಾವಣೆ ನಡೆಯುತ್ತಿದೆ. ನಿಖಿಲ್ ಕುಮಾರಸ್ವಾಮಿ ಗೆಲ್ಲಿಸಬೇಕು ಎಂದು ವೇದಿಕೆ ಮೇಲೆ ದೀರ್ಘ ದಂಡ ನಮಸ್ಕಾರ ಹಾಕಿ ಮನವಿ ಮಾಡಿದರು.