ಚನ್ನಪಟ್ಟಣದಲ್ಲಿ ಪ್ರಚಾರ ನಡೆಸುತ್ತಿರುವ ನಿಖಿಲ್ ಕುಮಾರಸ್ವಾಮಿ, ಜನರ ಪ್ರೀತಿ, ಮನ್ನಣೆ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಪ್ರಚಾರದ ವೇಳೆ ಮಾತನಾಡಿದ ಅವರು, ತಾಯಂದಿರು, ಹಿರಿಯರು, ಯುವಕರು, ಎಲ್ಲಾ ವರ್ಗದಿಂದ ಪ್ರೀತಿ ಸಿಗುತ್ತಿದೆ. ದೇವೇಗೌಡರು, ಕುಮಾರಣ್ಣರು ಸಂಪಾದಿಸಿರುವ ಆಸ್ತಿ ಇದು ಎಂದು ಹೇಳಿದ್ದಾರೆ.
ನಮ್ಮ ತಂದೆ ಹಾಗೂ ತಾತ ಚನ್ನಪಟ್ಟಣ ಜನರ ಹೃದಯ ಗೆದ್ದಿದ್ದಾರೆ. ಅದು ನನ್ನ ಮೇಲೆ ಈ ರೀತಿ ಪ್ರೀತಿ, ಅಭಿಮಾನವಾಗಿ ವ್ಯಕ್ತವಾಗ್ತಿದೆ. ದೇವೇಗೌಡರ ಇಗ್ಗಲೂರು ಡ್ಯಾಂ ನಿರ್ಧಾರ ಐತಿಹಾಸಿಕವಾಗಿದೆ. ಕುಮಾರಣ್ಣರ ನೀರಾವರಿ ಯೋಜನೆ ಕೂಡ ಅದಕ್ಕೆ ಕಾರಣವಾಗಿದೆ.